
ಪ್ರಜಾವಾಣಿ ವಾರ್ತೆ
ಬೆಂಗಳೂರು: ಮೈಸೂರಿನ ಅಥ್ಲೀಟ್ ಎಂ. ಯೋಗೇಂದ್ರ ಅವರು ಶನಿವಾರ 46ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‌ನ 2000 ಮೀಟರ್ ಸ್ಟೀಪಲ್ ಚೇಸ್ ಓಟದಲ್ಲಿ ಕಂಚಿನ ಪದಕ ಗೆದ್ದರು.
ಯೋಗೇಂದ್ರ ಅವರಿಗೆ ಅಥ್ಲೆಟಿಕ್ ತರಬೇತುದಾರ ಡಾ.ಟಿ.ಜೆ. ರಾಜೀವ್ ಪದಕ ಪ್ರದಾನ ಮಾಡಿದರು.
ತಿರುವನಂತಪುರದ ಕೇರಳ ವಿಶ್ವವಿದ್ಯಾಲಯ ಮೈದಾನದಲ್ಲಿ ಜ.28ರಿಂದ ನಡೆಯುತ್ತಿರುವ ಕೂಟ ಫೆ.1ರಂದು ಮುಕ್ತಾಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.