ADVERTISEMENT

ಕ್ವಾರ್ಟರ್‌ಫೈನಲ್‌ಗೆ ಅಂಕಿತ್, ಸಚಿನ್‌

ವಿಶ್ವ ಯೂತ್ ಬಾಕ್ಸಿಂಗ್‌: ಭಾರತದ ಐವರು ಎಂಟರಘಟ್ಟಕ್ಕೆ

ಪಿಟಿಐ
Published 18 ಏಪ್ರಿಲ್ 2021, 10:46 IST
Last Updated 18 ಏಪ್ರಿಲ್ 2021, 10:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಐವರು ಬಾಕ್ಸರ್‌ಗಳು ಪೋಲೆಂಡ್‌ನ ಕಿಯೆಲ್ಸೆಯಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಏಷ್ಯನ್ ಬೆಳ್ಳಿ ಪದಕ ವಿಜೇತ ಅಂಕಿತ್ ನರ್ವಾಲ್‌ (64 ಕೆಜಿ ತೂಕ ವಿಭಾಗ), ಬಿಶ್ವಾಮಿತ್ರ ಚೋಂಗ್ಥಮ್‌ (49 ಕೆಜಿ), ಸಚಿನ್ (56 ಕೆಜಿ) ಹಾಗೂ ವಿಶಾಲ್‌ ಗುಪ್ತಾ (91 ಕೆಜಿ), ಮಹಿಳೆಯರಲ್ಲಿ ಗೀತಿಕಾ (48 ಕೆಜಿ) ಎಂಟರಘಟ್ಟಕ್ಕೆ ಲಗ್ಗೆಯಿಟ್ಟವರು.

ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಗೀತಿಕಾ 5–0ಯಿಂದ ಕಜಕಸ್ತಾನದ ಅರಾಯ್‌ಲಿಮ್‌ ಮಾರಟ್‌ ಅವರನ್ನು ಮಣಿಸಿದರು.

ADVERTISEMENT

ಚೋಂಗ್ಥಮ್‌ ಅವರು ಮಹಿದಿ ಕೊಶ್ರೊಶಾಹಿ ಎದುರು, ಸಚಿನ್‌ ಅವರು ಡೇವಿಡ್‌ ಜಿಮೆನೆಜ್ ವಿರುದ್ಧ 5–0 ಅಂತರದಿಂದಲೇ ಗೆಲುವು ಸಾಧಿಸಿದರು.

ಅಂಕಿತ್‌ 4–1ರಿಂದ ಪೋಲೆಂಡ್‌ನ ಆಲಿವರ್‌ ಜಮೊಯಿಸ್ಕಿ ವಿರುದ್ಧ ಜಯಿಸಿದರೆ, ವಿಶಾಲ್‌ ಅವರು ಕ್ರೊವೇಷ್ಯಾದ ಬಾರ್ನಾ ಲೊನ್ಕಾರಿಚ್ ಅವರ ಸವಾಲು ಮೀರಿ ಮುನ್ನಡೆದರು.

64 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ನಿಶಾ ಅವರ ಅಭಿಯಾನ ಅಂತ್ಯವಾಯಿತು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅವರು 1–4ರಿಂದ ಲಾಟ್ವಿಯದ ಬೀಟ್‌ರೈಸ್‌ ರೋಜಂಟೇಲ್ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.