ADVERTISEMENT

ಶೆಫಾಲಿಗೆ ಸಚಿನ್ ಮೆಚ್ಚುಗೆ

ಪಿಟಿಐ
Published 12 ಫೆಬ್ರುವರಿ 2020, 18:43 IST
Last Updated 12 ಫೆಬ್ರುವರಿ 2020, 18:43 IST
ಶೆಫಾಲಿ ವರ್ಮಾ
ಶೆಫಾಲಿ ವರ್ಮಾ   

ಮೆಲ್ಬರ್ನ್: ಭಾರತ ಮಹಿಳಾ ತಂಡದ ಆಟಗಾರ್ತಿ ಶೆಫಾಲಿ ವರ್ಮಾ ಅವರ ಸಂತಸಕ್ಕೆ ಈಗ ಪಾರವೇ ಇಲ್ಲ. ಅವರಿಗೆ ಪ್ರೇರಣೆಯಾದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮೆಚ್ಚುಗೆಗೆ ಪಾತ್ರರಾಗಿರುವುದೇ ಇದಕ್ಕೆ ಕಾರಣ.

ಶೆಫಾಲಿ ಕುರಿತು ಟ್ವೀಟ್ ಮಾಡಿರುವ ಸಚಿನ್, ‘ಶೆಫಾಲಿ ನಿಮ್ಮನ್ನು ಭೇಟಿಯಾಗಿದ್ದು ಖುಷಿಕೊಟ್ಟಿತು. ನೀವು ಲಾಹ್ಲಿಯಲ್ಲಿ ನಾನು ಆಡಿದ್ದ ಕೊನೆಯ ರಣಜಿ ಪಂದ್ಯವನ್ನು ನೋಡಲು ಬಂದಿದ್ದನ್ನು ವಿವರಿಸಿದ್ದಿರಿ. ನಿಮ್ಮ ಆ ಪಯಣದ ಕುರಿತು ಕೇಳಿ ಪುಳಕಿತನಾದೆ. ಇವತ್ತು ನೀವು ಭಾರತ ತಂಡಕ್ಕೆ ಆಡುತ್ತಿರುವುದನ್ನು ನೋಡಲು ನಿಜಕ್ಕೂ ಹೆಮ್ಮೆ ಮತ್ತು ಸಂತಸವಾಗುತ್ತಿದೆ’ ಎಂದಿದ್ದಾರೆ.

‘ನಿಮ್ಮ ಕನಸುಗಳನ್ನು ನಿರಂತರವಾಗಿ ಬೆನ್ನತ್ತಿ. ಏಕೆಂದರೆ, ಕನಸುಗಳು ನನಸಾಗುತ್ತವೆ. ಆಟವನ್ನು ಮನತುಂಬಿ ಆಸ್ವಾದಿಸಿ, ನಿಮ್ಮ ಶ್ರೇಷ್ಠ ಸಾಮರ್ಥ್ಯವನ್ನು ಪಣಕ್ಕೊಡ್ಡಿರಿ’ ಎಂದು ಸಚಿನ್ ಶುಭ ಹಾರೈಸಿದ್ದಾರೆ.

ADVERTISEMENT

ಸಚಿನ್ ತೆಂಡೂಲ್ಕರ್ 2013ರಲ್ಲಿ ಹರಿಯಾಣದ ಲಾಹ್ಲಿಯಲ್ಲಿ ತಮ್ಮ ವೃತ್ತಿಜೀವನದ ಕೊನೆಯ ರಣಜಿ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಆಗ ಒಂಬತ್ತರ ಬಾಲಕಿ ಶೆಫಾಲಿ ಆ ಪಂದ್ಯವನ್ನು ವೀಕ್ಷಿಸಿದ್ದನ್ನು ಈಚೆಗೆ ತೆಂಡೂಲ್ಕರ್ ಅವರೊಂದಿಗೆ ಭೇಟಿಯಾದಾಗ ಹೇಳಿದ್ದರು. ಶೆಫಾಲಿ ಹರಿಯಾಣದ ರೋಹ್ಟಕ್‌ನವರು.

ಸದ್ಯ ಶೆಫಾಲಿ, ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.