ಸಾಮಗ್ರಿ: ಒಂದು ದೊಡ್ಡ ಕಬ್ಬಿಣದ ಮೊಳೆ, ನಿರೋಧವುಳ್ಳ ತಾಮ್ರದ ತಂತಿ, ಬ್ಯಾಟರಿ, ಗುಂಡು ಸೂಜಿಗಳು, ಬ್ಲೇಡ್, ಟೇಪ್.
ವಿಧಾನ: 1) ಒಂದು ದೊಡ್ಡ ಕಬ್ಬಿಣದ ಮೊಳೆಯನ್ನು ತೆಗೆದುಕೊಳ್ಳಿ. 2) ಚಿತ್ರದಲ್ಲಿ ತೋರಿಸಿದಂತೆ ತೆಳ್ಳನೆಯ, ನಿರೋಧವುಳ್ಳ ತಾಮ್ರದ ತಂತಿಯನ್ನು ಮೊಳೆಗೆ ಸುತ್ತಿ ಹಾಗೂ ಅದರ ಮೇಲೆ ಟೇಪ್ ಸುತ್ತಿರಿ. 3) ಎರಡೂ ಪ್ರತ್ಯೇಕ ತಂತಿಯ ತುದಿಗಳನ್ನು ಬ್ಲೇಡ್‌ನಿಂದ ತಿಕ್ಕಿ ನಿರೋಧ ಲೇಪನವನ್ನು ತೆಗೆದು ಹಾಕಿ. 4) ತಂತಿಯ ಒಂದು ತುದಿಯನ್ನು ಬ್ಯಾಟರಿಯ ತಳಕ್ಕೆ ಟೇಪ್‌ನಿಂದ ಹಚ್ಚಿರಿ. 5) ಇನ್ನೊಂದು ತುದಿಯನ್ನು ಬ್ಯಾಟರಿಯ ಮೇಲ್ಭಾಗದ ಲೋಹಕ್ಕೆ ಹಿಡಿಯಿರಿ.
ಪ್ರಶ್ನೆ: ಈಗ ಕಬ್ಬಿಣದ ಮೊಳೆಯನ್ನು ಗುಂಡುಸೂಜಿ/ಚಿಕ್ಕ ಕಬ್ಬಿಣದ ಮೊಳೆಗಳ ಹತ್ತಿರ ಹಿಡಿಯಿರಿ. ಏನಾಗುತ್ತದೆ? ಯಾಕೆ?
ಉತ್ತರ: ದೊಡ್ಡ ಕಬ್ಬಿಣದ ಮೊಳೆ ಗುಂಡುಸೂಜಿಗಳನ್ನು/ಚಿಕ್ಕ ಕಬ್ಬಿಣದ ಮೊಳೆಗಳನ್ನು ಆಕರ್ಷಿಸುತ್ತದೆ. ಯಾಕೆಂದರೆ ಕಬ್ಬಿಣದ ಮೊಳೆಯು ವಿದ್ಯುತ್‌ಕಾಂತವಾಗಿ ಮಾರ್ಪಾಟಾಗುತ್ತದೆ. ವಿದ್ಯುತ್, ತಂತಿಯಲ್ಲಿ ಚಲಿಸಿ, ತಂತಿಯ ಸುತ್ತಲೂ ಕಾಂತೀಯ ಕ್ಷೇತ್ರ ನಿರ್ಮಾಣವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.