ಕೇಂದ್ರ ಲೋಕಸೇವಾ ಆಯೋಗ, ಉತ್ತರ ರೈಲ್ವೆ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಸೇನಾಪಡೆ, ಸ್ಟಾಫ್ ಸೆಲೆಕ್ಷನ್ ಕಮಿಷನ್, ಒಎನ್‌ಜಿಸಿ
ಕೇಂದ್ರ ಲೋಕಸೇವಾ ಆಯೋಗ
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 520 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು 17-2-2013ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಪರೀಕ್ಷೆ ನಡೆಸುವುದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-12-2012.
ಹುದ್ದೆ ವಿವರ: 1) ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್: 260 ಹುದ್ದೆ. ವಿದ್ಯಾರ್ಹತೆ: ಪದವಿ
2) ನೇವಲ್ ಅಕಾಡೆಮಿ, ಎಜಿಮಾಲಾ: 40 ಹುದ್ದೆ. ವಿದ್ಯಾರ್ಹತೆ: ಬಿ.ಎಸ್ಸಿ (ಫಿಜಿಕ್ಸ್ ಅಂಡ್ ಮ್ಯಾಥವೆುಟಿಕ್ಸ್)
3) ಏರ್‌ಫೋರ್ಸ್ ಅಕಾಡೆಮಿ, ಹೈದರಾಬಾದ್: 32 ಹುದ್ದೆ. ವಿದ್ಯಾರ್ಹತೆ: ಪದವಿ (10+2 ಹಂತದಲ್ಲಿ ಫಿಜಿಕ್ಸ್ ಅಂಡ್ ಮ್ಯಾಥಮೆಟಿಕ್ಸ್)
4) ಆಫೀರ್ಸಸ್ ಆಫ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ: 176 ಹುದ್ದೆ: ವಿದ್ಯಾರ್ಹತೆ: ಪದವಿ
5) ಆಫೀಸರ್ಸ್ ಆಫ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ (ಮಹಿಳೆಯರು): 176 ಹುದ್ದೆ. ವಿದ್ಯಾರ್ಹತೆ: ಪದವಿ
ಅರ್ಜಿ ಶುಲ್ಕ: ರೂ 200
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ (ಬೆಂಗಳೂರಿನಲ್ಲೂ ನಡೆಯಲಿದೆ)
ವಿಳಾಸ: ಜಂಟಿ ನಿರ್ದೇಶಕರು (ನೇಮಕಾತಿ), ಕೇಂದ್ರ ಲೋಕಸೇವಾ ಆಯೋಗ, ಧೋಲ್‌ಪುರ ಹೌಸ್, ಶಹಜಹಾನ್ ರಸ್ತೆ, ನವದೆಹಲಿ.
ಮಾಹಿತಿಗೆ http://upsc.gov.in-
ಉತ್ತರ ರೈಲ್ವೆ
ಉತ್ತರ ರೈಲ್ವೆಯಲ್ಲಿ (ನವದೆಹಲಿ) 7368 `ಡಿ~ ಗುಂಪಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-12-2012.
ಹುದ್ದೆ ವಿವರ: ಟ್ರಾಫಿಕ್ ಪೋರ್ಟರ್/ ಪಾಯಿಂಟ್ಸ್‌ಮನ್/ ಗೇಟ್‌ಮನ್/ ಖಲಾಸಿ ಹೆಲ್ಪರ್/ ಟ್ರ್ಯಾಕ್‌ಮನ್/ ಕ್ಯಾರೇಜ್ ಕ್ಲೀನರ್/ ಡಿಎಸ್‌ಎಲ್ ಖಲಾಸಿ/ ಸಫಾಯಿವಾಲಾ/ ಹಾಸ್ಪಿಟಲ್ ಅಟೆಂಡೆಂಟ್ ( ಪುರುಷರು ಹಾಗೂ ಮಹಿಳೆಯರು)
ವೇತನ ಶ್ರೇಣಿ: ರೂ 5,200- 20,200.
ವಯೋಮಿತಿ: ಕನಿಷ್ಠ 18, ಗರಿಷ್ಠ 33. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಅಥವಾ ಐಟಿಐ
ಅರ್ಜಿ ಶುಲ್ಕ: ರೂ 40
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ವಿಳಾಸ: ಅಸಿಸ್ಟೆಂಟ್ ಪರ್ಸನಲ್ ಆಫೀಸರ್ (ಆರ್‌ಆರ್‌ಸಿ), ರೈಲ್ವೆ ರೆಕ್ರೂಟ್‌ಮೆಂಟ್ ಸೆಲ್, ಲಜ್‌ಪತ್ ನಗರ-1, ನವದೆಹಲಿ- 110 024
ಮಾಹಿತಿಗೆ http://www.rrcnr.org
ಕ್ಯಾಬಿನೆಟ್ ಸೆಕ್ರೆಟರಿಯೇಟ್
ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ 27 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-11-2012.
ಹುದ್ದೆ ವಿವರ: 1) ಇಂಟರ್‌ಪ್ರಿಟರ್: 25 ಹುದ್ದೆಗಳು
2) ಅಸಿಸ್ಟೆಂಟ್ ಫೋರ್‌ಮನ್: 2 ಹುದ್ದೆ
ವೇತನ ಶ್ರೇಣಿ: ರೂ 9,300- 34,800.
ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿಳಾಸ: ಪೋಸ್ಟ್ ಬ್ಯಾಗ್ ನಂ. 001, ಲೋಧಿ ರಸ್ತೆ, ಹೆಡ್ ಫೋಸ್ಟ್ ಆಫೀಸ್ ನವದೆಹಲಿ-110 003, ಮಾಹಿತಿಗೆ
http://www.davp.nic.in/WriteReadData/ADS/eng_58101_47_1213b.pdf-
ಸೇನಾಪಡೆ
ಸೇನಾಪಡೆಯಲ್ಲಿ 80 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-12-2012.
ಹುದ್ದೆ ಹೆಸರು: 29ನೇ 10+2 ಟೆಕ್ನಿಕಲ್ ಎಂಟ್ರಿ ಸ್ಕೀಮ್ (ಟಿಇಎಸ್) ಕೋರ್ಸ್
ವೇತನ ಶ್ರೇಣಿ: ರೂ 15,600- 39,100
ವಯೋಮಿತಿ: 1-1-1994 ಹಾಗೂ 1-1-1997ರ ನಡುವೆ ಜನಿಸಿರಬೇಕು.
ವಿದ್ಯಾಭ್ಯಾಸ: ಶೇಕಡಾ 70 ಅಂಕಗಳೊಂದಿಗೆ 10+2 ಪರೀಕ್ಷೆಯಲ್ಲಿ ಉತ್ತೀರ್ಣ (ಫಿಜಿಕ್ಸ್, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್)
ಆಯ್ಕೆ ವಿಧಾನ: ಸಂದರ್ಶನ (ಬೆಂಗಳೂರಿನಲ್ಲೂ ನಡೆಯಲಿದೆ)
* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್ ಕಳುಹಿಸಲು ಕೊನೆಯ ದಿನಾಂಕ: 10-12-2012
ವಿಳಾಸ: ಅಡಿಷನಲ್ ಡೈರಕ್ಟರೇಟ್ ಜನರಲ್ ಆಫ್ ರೆಕ್ರೂಟಿಂಗ್ (ಆರ್‌ಟಿಜಿ-6), ಟೆಸ್ಟ್ ಸೆಕ್ಷನ್, ವೆಸ್ಟ್ ಬ್ಲಾಕ್-111, ಆರ್.ಕೆ.ಪುರಂ, ನವದೆಹಲಿ-110066
ಮಾಹಿತಿಗೆ indianarmy.nic.i-
ಸ್ಟಾಫ್ ಸೆಲೆಕ್ಷನ್ ಕಮಿಷನ್
ವಿವಿಧ ರಾಜ್ಯಗಳಲ್ಲಿ `ಸಿ~ ಗುಂಪಿನ ಹುದ್ದೆಗಳನ್ನು ಭರ್ತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7-12-2012.
ಹುದ್ದೆ ವಿವರ: ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್) ಸ್ಟಾಫ್
ವೇತನ ಶ್ರೇಣಿ: ರೂ 5,200- 20,200.
ವಯೋಮಿತಿ: ಕನಿಷ್ಠ 18, ಗರಿಷ್ಠ 25. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ
ಅರ್ಜಿ ಶುಲ್ಕ: ರೂ 100
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, `ಇ~ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-560034
ಮಾಹಿತಿಗೆ http://www.sscner.org.in-
ಒಎನ್‌ಜಿಸಿ
ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್‌ನಲ್ಲಿ (ಒಎನ್‌ಜಿಸಿ) 85 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-12-2012.
ಹುದ್ದೆ ವಿವರ: ಸ್ಪೆಷಲಿಸ್ಟ್ಸ್ ಆಫೀಸರ್/ ಎಕ್ಸ್‌ಪರ್ಟ್ ಇನ್ ಒಎನ್‌ಜಿಸಿ (ಇ4/ಇ2)
ವೇತನ ಶ್ರೇಣಿ: ರೂ 36,600- 62,000 (ಇ4) ರೂ 29,100- 54,500 (ಇ2)
ಅರ್ಜಿ ಶುಲ್ಕ: ರೂ 500
ವಿಳಾಸ: ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್‌ಆರ್)- ರೆಕ್ರೂಟ್‌ಮೆಂಟ್, ಒಎನ್‌ಜಿಸಿ, ಬಿ.ಎಸ್.ನೇಗಿ ಭವನ್, ಮೂರನೇ ಮಹಡಿ, ಕಾರ್ಪೊರೇಟ್ ಆರ್ ಅಂಡ್ ಪಿ, ಟೆಲ್ ಭವನ್, ಡೆಹ್ರಾಡೂನ್-248 003
ಹೆಚ್ಚಿನ ಮಾಹಿತಿಗೆ http://www.ongcindia.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.