ಸಾಮಗ್ರಿ: ಗ್ರಾಫ್ ಕಾಗದ, ಪೆನ್ಸಿಲ್
ವಿಧಾನ
1. ಒಂದು ಗ್ರಾಫ್ ಕಾಗದದ ಮೇಲೆ ಒಂದು ತಾಜಾ ಎಲೆಯನ್ನಿಟ್ಟು, ಸರಿಯಾಗಿ ಹರಡಿ. ಎಲೆಯ ಅಂಚಿನವರೆಗೂ ಪೆನ್ಸಿಲ್ನಿಂದ ಗೆರೆ ಎಳೆಯಿರಿ.
2. ಎಲೆಯನ್ನು ಹೊರತೆಗೆದು ಗ್ರಾಫ್ ಕಾಗದದಲ್ಲಿ ಗೆರೆಯ ಮಧ್ಯೆ ಎಷ್ಟು ಪೂರ್ಣಚೌಕಗಳಿವೆ (ಸೆ.ಮೀ.), ಅರ್ಧ ಹಾಗೂ 3/4ಕ್ಕಿಂತ ಹೆಚ್ಚು ಭಾಗವನ್ನು ಆವರಿಸಿರುವ ಚೌಕಗಳೆಷ್ಟು, ಅರ್ಧಕ್ಕಿಂತ ಕಡಿಮೆ
ಚೌಕಗಳೆಷ್ಟು ಎಣಿಸಿ.
ಪ್ರಶ್ನೆ: ಪೂರ್ಣ, ಮುಕ್ಕಾಲು ಹಾಗೂ ಅರ್ಧಕ್ಕೂ ಹೆಚ್ಚು ಭಾಗ ಆವರಿಸಿರುವ ಚೌಕಗಳನ್ನು ಎಣಿಸಿ ಎಲೆಯ ವಿಸ್ತಾರವನ್ನು ಕಂಡು ಹಿಡಿಯಲು ಸಾಧ್ಯವೇ?
ಉತ್ತರ: ಚಿತ್ರದಲ್ಲಿ 9 ಸೆಂ.ಮೀ.ನ ಪೂರ್ಣ ಚೌಕಗಳು, 6 -ಮುಕ್ಕಾಲು ಚೌಕಗಳು ಹಾಗೂ ಅರ್ಧಕ್ಕೂ ಹೆಚ್ಚು ಭಾಗ ಆವರಿಸಿದ ಚೌಕಗಳಿವೆ.
ಅಂದರೆ, ಎಲೆಯ ಒಟ್ಟು ವಿಸ್ತಾರ 15 ಚದರ ಸೆ.ಮೀ. ಬೆಳೆಯುವ ಎಲೆಯ ಬೆಳವಣಿಗೆಯನ್ನು ನಾವು ಇದರಿಂದ ತಿಳಿಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.