ವಿಧಾನ: ಚಿತ್ರ 1ರಲ್ಲಿ ತೋರಿಸಿದಂತೆ ಒಂದು ಕುರ್ಚಿಯ ಮೇಲೆ ಎದೆ ಸೆಟಿಸಿ, ನೆಟ್ಟಗೆ ಕುಳಿತುಕೊಳ್ಳಿರಿ. ನಿಮ್ಮ ದೇಹವನ್ನು ಹಾಗೂ ಕೈಕಾಲುಗಳನ್ನು ಹಿಂದಕ್ಕೆ ಮುಂದಕ್ಕೆ ಬಾಗಿಸಬೇಡಿ. ಚಿತ್ರ 2ರಲ್ಲಿ ತೋರಿಸಿದಂತೆ ಸ್ವಲ್ಪ ಮುಂದಕ್ಕೆ ಬಾಗಿ.
ಪ್ರಶ್ನೆ: 1) ಚಿತ್ರ 1ರಲ್ಲಿ ತೊರಿಸಿದಂತೆ ಕುಳಿತುಕೊಂಡು ಮೇಲೇಳಿ. ಸಾಧ್ಯವಾಯಿತೇ? ಯಾಕೆ?
ಚಿತ್ರ 2ರಲ್ಲಿ ತೋರಿಸಿದಂತೆ ಮುಂದಕ್ಕೆ ಬಾಗಿ ಏಳಿ. ಸಾಧ್ಯವಾಯಿತೆ? ಯಾಕೆ?
ಉತ್ತರ: ಚಿತ್ರ 1ರಲ್ಲಿ ತೋರಿಸಿದಂತೆ ಕುಳಿತುಕೊಂಡಾಗ, ಗುರುತ್ವ ಕೇಂದ್ರ (Center of gravity) ದಗುಂಟ ಎಳೆದ ಶೃಂಗೀಯ ರೇಖೆಯು (Vertical line), ಪಾಯದಲ್ಲಿ ಹಾಯ್ದುಹೋಗಿ ದೇಹವು ಸ್ಥಿರವಾಗಿರುತ್ತದೆ. ಇಲ್ಲಿ ನಿಮ್ಮ ದೇಹದ ಗುರುತ್ವ ಕೇಂದ್ರವು ನಿಮ್ಮ ಕಾಲುಗಳ ಒಳಗೆ ಬೀಳುವುದರಿಂದ ಮೇಲೇಳಲು ಆಗುವುದೇ ಇಲ್ಲ.
ಚಿತ್ರ 2ರಲ್ಲಿ ತೋರಿಸಿದಂತೆ ನೀವು ಬಾಗಿದಾಗ ಶೃಂಗೀಯ ರೇಖೆಯು ಪಾಯದ ಹೊರಗೆ ಬಿದ್ದು, ಅಂದರೆ ನಿಮ್ಮ ಪಾದಗಳಲ್ಲಿ ಬಿದ್ದು ದೇಹವು ಅಸ್ಥಿರವಾಗುತ್ತದೆ. ಆಗ ಮೇಲೇಳಲು ಸಾಧ್ಯವಾಗುತ್ತದೆ. ಹೀಗೆಯೇ ಗೋಡೆಗೆ ನೇರವಾಗಿ ನಿಂತುಕೊಂಡು, ಮುಂದೆ ಚಲಿಸದೇ ನಿಮ್ಮ ಮುಂದೆ ಕರವಸ್ತ್ರವನ್ನು ಹಾಕಿ ಎತ್ತಿಕೊಳ್ಳುವುದು ಅಷ್ಟೇ ಕಷ್ಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.