ADVERTISEMENT

ತುದಿ ಬೆರಳಿಗಂಜುವ ಧನಿಯಾ ಪುಡಿ

ಮಾಡಿ ನಲಿ ಸರಣಿ–100

ಪ್ರೊ.ಸಿ ಡಿ ಪಾಟೀಲ್
Published 8 ಫೆಬ್ರುವರಿ 2015, 19:30 IST
Last Updated 8 ಫೆಬ್ರುವರಿ 2015, 19:30 IST
ತುದಿ ಬೆರಳಿಗಂಜುವ ಧನಿಯಾ ಪುಡಿ
ತುದಿ ಬೆರಳಿಗಂಜುವ ಧನಿಯಾ ಪುಡಿ   

ಸಾಮಗ್ರಿಗಳು: ಅಗಲವಾದ ತಟ್ಟೆ, ನೀರು, ಸಾಬೂನಿನ ದ್ರಾವಣ, ಧನಿಯಾ ಪುಡಿ

ವಿಧಾನ: ಒಂದು ಅಗಲವಾದ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಮುಕ್ಕಾಲು ಭಾಗ ನೀರು ಹಾಕಿರಿ.
ನೀರಿನ ಮೇಲೆ ಒಂದೆರಡು ಚಿಟಿಕೆಯಷ್ಟು ಧನಿಯಾ ಪುಡಿಯನ್ನು ಉದುರಿಸಿರಿ.

ಪ್ರಶ್ನೆ:
ನಿಮ್ಮ ತೋರು ಬೆರಳನ್ನು ತಟ್ಟೆಯ ಮಧ್ಯದಲ್ಲಿ, ನೀರಿನಲ್ಲಿ ಹಗುರವಾಗಿ ಅದ್ದಿರಿ. ಧನಿಯಾ ಪುಡಿಯಲ್ಲಿ ಏನಾದರೂ ಬದಲಾವಣೆಗಳಾದವೇ?

ತುದಿ ಬೆರಳನ್ನು ಸಾಬೂನಿನ (Detergent) ದ್ರಾವಣದಲ್ಲಿ ಅದ್ದಿ, ತಟ್ಟೆಯ ಮಧ್ಯದ ನಿರಿಗೆ ಹಗುರವಾಗಿ ತಾಕಿಸಿರಿ. ಧನಿಯಾ ಪುಡಿಯಲ್ಲಾದ ಬದಲಾವಣೆಗಳೇನು? ಏನು ಕಾರಣ?

ಉತ್ತರ:
ಧನಿಯಾ ಪುಡಿಯಲ್ಲಿ ಯಾವ ಬದಲಾವಣೆಗಳು ಕಾಣುವುದಿಲ್ಲ. ನೀರಿನ ಮೇಲ್ಮೈ ಸೆಳೆತ (Surface tension) ದ ಕಾರಣದಿಂದ, ಧನಿಯಾ ಪುಡಿಯು ನೀರಿನ ಮೇಲೆ ಎಲ್ಲ ಕಡೆ ಹರಡಿ ತೇಲುತ್ತಿರುತ್ತದೆ. ಸಾಬೂನಿನ ದ್ರಾವಣವು ನೀರಿನ ಮೇಲ್ಮೈ ಸೆಳೆತವನ್ನು ತಗ್ಗಿಸುತ್ತದೆ. ನೀವು ಸಾಬೂನಿನ ದ್ರಾವಣದಲ್ಲಿ ಅದ್ದಿದ ತುದಿಬೆರಳನ್ನು ಪಾತ್ರೆಯ ಮಧ್ಯದಲ್ಲಿ ಅದ್ದಿದಾಗ  ನೀರಿನ ಮೇಲ್ಮೈ ಸೆಳೆಯ ಕುಗ್ಗಿ, ಹರಡಿದ ಧನಿಯಾ ಪುಡಿ ಅಂಚಿನ ಕಡೆಗೆ ಸರಿಯುತ್ತದೆ. ಒಂದು ಲೋಟದ ಬಾಯಿಗೆ ರಬ್ಬರ್ ಪರೆಯನ್ನು ಜಗ್ಗಿ ಹಾಕಿ, ಅನಂತರ ರಬ್ಬರನ್ನು ಮಧ್ಯದಲ್ಲಿ ಕತ್ತರಿಸಿದಾಗ, ಅದು ಲೋಟದ ಅಂಚಿನ ಕಡೆಗೆ ಹೋಗುವಂತೆ ತೇಲುವ ಪುಡಿ ಸರಿಯುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.