ADVERTISEMENT

ಬಿಸ್ಕತ್ ಕರಗಲು ಕಾರಣ

ಮಾಡಿ ನಲಿ, ಸರಣಿ – 98

ಪ್ರೊ.ಸಿ ಡಿ ಪಾಟೀಲ್
Published 25 ಜನವರಿ 2015, 19:30 IST
Last Updated 25 ಜನವರಿ 2015, 19:30 IST

ಸಾಮಗ್ರಿ: ಎರಡು ಪಾರ್ಲೆ ಬಿಸ್ಕತ್, ಎರಡು ಕಪ್‌ ತಣ್ಣಗಿನ ಅಥವಾ ಬಿಸಿ ಚಹಾ/ಹಾಲು/ನೀರು.
ವಿಧಾನ: 1) ಒಂದು ಕಪ್ಪಿನಲ್ಲಿ ಪೂರ್ಣ ತಣ್ಣಗಿನ ಹಾಗೂ ಇನ್ನೊಂದರಲ್ಲಿ ಬಹಳ ಬಿಸಿಯುಳ್ಳ ಚಹಾ/ಹಾಲು/ನೀರು ತೆಗೆದುಕೊಳ್ಳಿರಿ.
2) ತಣ್ಣಗಿನ ಹಾಗೂ ಬಿಸಿ ಚಹಾದಲ್ಲಿ ಒಂದೊಂದು ಪಾರ್ಲೆ ಬಿಸ್ಕತ್ತನ್ನು ಅರ್ಧದಷ್ಟು ಅದ್ದಿ, ಕ್ಷಿತಿಜೀಯ (Horizontal) ವಾಗಿ ಹಿಡಿದುಕೊಳ್ಳಿರಿ.

ಪ್ರಶ್ನೆ: ತಣ್ಣಗಿರುವ ಹಾಗೂ ಬಿಸಿ ಇರುವ ಚಹಾದಲ್ಲಿ ಅದ್ದಿ ಹೊರತೆಗೆದ ಬಿಸ್ಕತ್‌ಗಳಿಗೆ ಏನಾಗುತ್ತದೆ? ಯಾಕೆ?
ಉತ್ತರ: ತಣ್ಣಗಿನ ಚಹಾದಲ್ಲಿ ಅದ್ದಿ ತೆಗೆದ ಬಿಸ್ಕತ್ ಬಹಳ ಸಮಯದ ನಂತರ ಮುರಿದು ಬೀಳುತ್ತದೆ. ಬಿಸಿ ಚಹಾದಲ್ಲಿ ಅದ್ದಿ ತೆಗೆದ ಬಿಸ್ಕತ್ ಸ್ವಲ್ಪೇ ಸಮಯದಲ್ಲಿ ಮುರಿದು ಬೀಳುತ್ತದೆ. ಯಾಕೆಂದರೆ- ಬಿಸ್ಕಿತ್ ತಯಾರಿಸಿದ ಹಿಟ್ಟಿನಲ್ಲಿ ಪಿಷ್ಟ, ಸೆಲ್ಯೂಲೋಸ್,

ಪೆಕ್ಟಿನ್‌ಗಳಂಥ ಜಲಪ್ರೇಮಿ/ಜಲಪ್ರಿಯ (Hydrophilic) ವಸ್ತುಗಳಿರುತ್ತವೆ. ಅವುಗಳು ನೀರನ್ನು ಹೀರಿಕೊಂಡು ಉಬ್ಬುತ್ಯವೆ. ಈ ಕ್ರಿಯೆಗೆ ಇಂಬೈಬೀಶನ್ (Imbibition) ಎಂದು ಕರೆಯುತ್ತಾರೆ. ಹೆಚ್ಚಿನ ತಾಪಮಾನದಲ್ಲಿ ಈ ಪದಾರ್ಥಗಳು ಶೀಘ್ರಗತಿಯಲ್ಲಿ ನೀರನ್ನು ಹೀರಿ (Absorb) ಕೊಂಡು ಉಬ್ಬುತ್ತವೆ. ಬಿಸಿ ಚಹಾದಲ್ಲಿ ಈ ಕ್ರಿಯೆ ಬಹಳ ಕಡಿಮೆ ಸಮಯದಲ್ಲಿ ಜರುಗಿ ಮುಂದಿನ ಅರ್ಧಭಾಗದ ಭಾರ ಹೆಚ್ಚಿ, ಮುರಿದು ಬೀಳುತ್ತದೆ. ಮರದಿಂದ ಮಾಡಿದ ಕಿಟಕಿ/ಬಾಗಿಲಗಳು ಮಳೆಗಾಲದಲ್ಲಿ ಉಬ್ಬುವುದರಿಂದ ಅವುಗಳನ್ನು ತೆರೆಯುವುದು ಹಾಗೂ ಮುಚ್ಚುವುದು ಸ್ವಲ್ಪ ಕಠಿಣ. ಇದಕ್ಕೆ ಕಾರಣ ಇಂಬೈಬೀಶನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT