ADVERTISEMENT

ಬೆಂಕಿ ಉಗುಳುವ ಪೊಟ್ಯಾಷಿಯಂ ಪರ್ಮಾಂಗನೇಟ್

ಮಾಡಿನಲಿ, ಸರಣಿ–92

ಪ್ರೊ.ಸಿ ಡಿ ಪಾಟೀಲ್
Published 14 ಡಿಸೆಂಬರ್ 2014, 19:30 IST
Last Updated 14 ಡಿಸೆಂಬರ್ 2014, 19:30 IST

ಬೇಕಾಗುವ ಸಲಕರಣೆ: ಕಾಗದ, ಗ್ಲಿಸರಿನ್, ಪೊಟ್ಯಾಷಿಯಂ ಪರ್ಮಾಂಗನೇಟ್.
ವಿಧಾನ: 1) ಒಂದು ಚಮಚ ಪೊಟ್ಯಾಷಿಯಂ ಪರ್ಮಾಂಗನೇಟ್ನ್ನು ಒಂದು ಕಾಗದದ ಮೇಲೆ ಹಾಕಿ, ಕುಪ್ಪಿ ಮಾಡಿ, ಟೇಬಲ್ ಮೇಲಿಡಿ. 2) ಕುಪ್ಪಿಯ ಮೇಲೆ 3-4 ಹನಿ ಗ್ಲಿಸರಿನ್ ಹಾಕಿರಿ. (ನಂತರ ಒಂದೆರಡು ಹೆಜ್ಜೆ ಹಿಂದೆ ಸರಿಯಿರಿ)

ಪ್ರಶ್ನೆ: ಯಾವ ಕ್ರಿಯೆಗಳು ಜರುಗುತ್ತವೆ. ಯಾಕೆ?

ಉತ್ತರ: ಅರ್ಧ ನಿಮಿಷದಲ್ಲಿ ಪೊಟ್ಯಾಷಿಯಂ ಪರ್ಮಾಂಗನೇಟ್ನ ಕುಪ್ಪಿಯಿಂದ ಬಿಳಿ ಹೊಗೆ ಬರುವುದು ಕಾಣಿಸುತ್ತದೆ. ಜೊತೆಗೆ ಚಟ್ ಪಟ್ ಎಂಬ ಶಬ್ದವೂ ಬರುತ್ತದೆ. ನಂತರ ಜ್ವಾಲೆಯೂ ಕಾಣುತ್ತದೆ. ಎಲ್ಲವೂ ಸುಟ್ಟ ಮೇಲೆ  ಹಸಿರು ಮಿಶ್ರಿತ ಸ್ಥಳದಲ್ಲಿ ಬೂದಿ ದೊರೆಯುತ್ತದೆ. ಇದೊಂದು ತ್ವರಿತಗತಿಯಲ್ಲಿ ಜರುಗುವ ಬಹಿರುಷ್ಣಕ (Exothermic) ದಹನ ಕ್ರಿಯೆ. ಪೊಟ್ಯಾಷಿಯಂ ಪರ್ಮಾಂಗನೇಟ್ನಿಂದ ಗ್ಲಿಸರಿನ್ ಆಕ್ಸಿಡೀಕರಣ (Oxidation) ವಾಗುತ್ತದೆ. ಈ ಕ್ರಿಯೆಯಲ್ಲಿ ಕಪ್ಪು ಬಣ್ಣದ ಮ್ಯಾಂಗನೀಸ್ ಟ್ರೈಆಕ್ಸೈಡ್‌ ಉತ್ಪತ್ತಿಯಾಗುತ್ತದೆ ಹಾಗೂ ಬಿಳಿ ಬಣ್ಣದ ಪೊಟ್ಯಾಸಿಯಂ ಕಾರ್ಬೋನೇಟ್ ಉತ್ಪತ್ತಿಯಾಗುತ್ತದೆ.

ADVERTISEMENT

14KMNO4+4C3H5(OH)3→ 7K2CO3+7MN2O3+5CO2+16H20.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.