ಬೆಂಗಳೂರು: ಕರ್ನಾಟಕದ ಕಶ್ವಿ ವೆಂಕಟ್ ಕೋಣಂಕಿ ಅವರು ಜೈಪುರದಲ್ಲಿ ನಡೆಯುತ್ತಿರುವ ಎಐಟಿಎ 12 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಬಾಲಕಿಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.
ಬೆಂಗಳೂರಿನ 9 ವರ್ಷ ವಯಸ್ಸಿನ ಈ ಆಟಗಾರ್ತಿ, ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 7–6(4), 6–0ಯಿಂದ ಕರ್ನಾಟಕದವರೇ ಆದ ಅನೀಷಾ ಮರಿಯನ್ ಕಾರ್ನೆಲಿಯೊ ಅವರನ್ನು ಮಣಿಸಿದರು.
ಕಶ್ವಿ ಅವರು ಶನಿವಾರ ನಡೆಯ ಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಶ್ಚಿಮ ಬಂಗಾಳದ ಪ್ರಿಯಾಂಶಿ ಚಟರ್ಜಿ ಅವರ ಸವಾಲನ್ನು ಎದುರಿಸಲಿದ್ದಾರೆ. ಪ್ರಿಯಾಂಶಿ ಅವರು ನಾಲ್ಕರ ಘಟ್ಟದಲ್ಲಿ 6–2, 7–6(2)ರಿಂದ ಕರ್ನಾಟಕದ ರೂಹಿ ಸಿಂಗ್ ವಿರುದ್ಧ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.