ADVERTISEMENT

ಅಲ್ಕರಾಜ್‌ ಕಿರಿಯ ಎಟಿಪಿ 500 ವಿಜೇತ

ರಾಯಿಟರ್ಸ್
Published 21 ಫೆಬ್ರುವರಿ 2022, 18:15 IST
Last Updated 21 ಫೆಬ್ರುವರಿ 2022, 18:15 IST
ಕಾರ್ಲೋಸ್ ಅಲ್ಕರಾಜ್ –ಎಎಫ್‌ಪಿ ಚಿತ್ರ
ಕಾರ್ಲೋಸ್ ಅಲ್ಕರಾಜ್ –ಎಎಫ್‌ಪಿ ಚಿತ್ರ   

ರಿಯೊ ಡಿ ಜನೈರೊ: ಸ್ಪೇನ್‌ನ 18 ವರ್ಷದ ಕಾರ್ಲೋಸ್ ಅಲ್ಕರಾಜ್ ಅವರು ಎಟಿಪಿ 500 ಟೆನಿಸ್‌ ಟೂರ್ನಿಯ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಎರಡು ವರ್ಷಗಳ ಹಿಂದೆ ಟೂರ್‌ ಮಟ್ಟದ ಮೊದಲ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದ ಅವರು ಭಾನುವಾರ ರಾತ್ರಿ ನಡೆದ ರಿಯೊ ಓಪನ್ ಟೂರ್ನಿಯ ಫೈನಲ್‌ನಲ್ಲಿ ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮನ್‌ ಎದುರು 6-4, 6-2ರಲ್ಲಿ ಜಯ ಗಳಿಸಿದರು.

ವೇಳಾಪಟ್ಟಿಯಲ್ಲಿ ಆದ ಬದಲಾವಣೆಯಿಂದಾಗಿ ಕ್ವಾರ್ಟರ್ ಫೈನಲ್‌ ಮತ್ತು ಸೆಮಿಫೈನಲ್‌ ಪಂದ್ಯಗಳೆರಡನ್ನೂ ಅಲ್ಕರಾಜ್ ಶನಿವಾರ ಒಂದೇ ದಿನ ಆಡಬೇಕಾಗಿತ್ತು. ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಮಟಿಯೊ ಬೆರೆಟಿನಿ ಮತ್ತು ಮತ್ತೊಬ್ಬ ಪ್ರಮುಖ ಆಟಗಾರ ಫ್ಯಾಬಿಯೊ ಫಾಗ್ನಿನಿ ಅವರನ್ನು ಅಲ್ಕರಾಜ್ ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT