ADVERTISEMENT

ಸೋಲಿನಿಂದ ಪಾರಾದ ಸೆರೆನಾ

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಜೊಕೊವಿಚ್‌, ಫೆಡರರ್‌ಗೆ ಗೆಲುವು

ಏಜೆನ್ಸೀಸ್
Published 29 ಆಗಸ್ಟ್ 2019, 17:22 IST
Last Updated 29 ಆಗಸ್ಟ್ 2019, 17:22 IST
ಅಮೆರಿಕದ ಸೆರೆನಾ ವಿಲಿಯಮ್ಸ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದ ರೀತಿ –ಎಎಫ್‌ಪಿ ಚಿತ್ರ
ಅಮೆರಿಕದ ಸೆರೆನಾ ವಿಲಿಯಮ್ಸ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದ ರೀತಿ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಆರು ಬಾರಿಯ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌ ಅವರು ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲಿನಿಂದ ಪಾರಾದರು.

ಬುಧವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ 17 ವರ್ಷದ ಕ್ಯಾಟಿ ನ್ಯಾಲಿ ಅವರು ಸೆರೆನಾಗೆ ಕಠಿಣ ಸವಾಲೊಡ್ಡಿದರು.

ಮೊದಲ ಸೆಟ್‌ನಲ್ಲಿ 5–7ರಿಂದ ಸೋತ ಸೆರೆನಾ ನಂತರದ ಎರಡು ಸೆಟ್‌ಗಳಲ್ಲಿ 6–3, 6–1ರಿಂದ ಗೆದ್ದು ನಿಟ್ಟುಸಿರುಬಿಟ್ಟರು.

ADVERTISEMENT

ಇತರ ಪಂದ್ಯಗಳಲ್ಲಿ ಎಲಿನಾ ಸ್ವಿಟೋಲಿನಾ 6–4, 6–4ರಲ್ಲಿ ವೀನಸ್‌ ವಿಲಿಯಮ್ಸ್‌ ಎದುರೂ, ಆ್ಯಷ್ಲೆ ಬಾರ್ಟಿ 6–2, 7–6ರಲ್ಲಿ ಲೌರೆನ್‌ ಡೇವಿಸ್‌ ಮೇಲೂ, ಮ್ಯಾಡಿಸನ್‌ ಕೀಸ್‌ 6–4, 6–1ರಲ್ಲಿ ಜು ಲಿನ್‌ ವಿರುದ್ಧವೂ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ನೊವಾಕ್‌ ಜೊಕೊವಿಚ್‌ 6–4, 7–6, 6–1ರಲ್ಲಿ ವುವಾನ್‌ ಇಗ್ನಾಷಿಯೊ ಲೊಂಡೆರೊ ಎದುರೂ, ರೋಜರ್‌ ಫೆಡರರ್‌ 3–6, 6–2, 6–3, 6–4ರಲ್ಲಿ ದಮಿರ್‌ ಜುಮುಹರ್‌ ಮೇಲೂ, ಕೀ ನಿಶಿಕೋರಿ 6–2, 4–6, 6–3, 7–5ರಲ್ಲಿ ಬ್ರಾಡ್ಲಿ ಕ್ಲಾನ್‌ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.