ADVERTISEMENT

ಎಟಿಪಿ ಕಪ್‌: ಸೆಮಿಗೆ ಆಸ್ಟ್ರೇಲಿಯಾ

ಏಜೆನ್ಸೀಸ್
Published 9 ಜನವರಿ 2020, 17:59 IST
Last Updated 9 ಜನವರಿ 2020, 17:59 IST

ಸಿಡ್ನಿ : ನಿಕ್‌ ಕಿರ್ಗಿ ಯೋಸ್‌ ಮತ್ತು ಅಲೆಕ್ಸ್‌ ಡಿ ಮಿನೋರ್‌ ಅವರ ಅಮೋಘ ಆಟ ದಿಂದ ಆಸ್ಟ್ರೇಲಿಯಾ ಎಟಿಪಿ ಕಪ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ತಲುಪಿತು. ಆತಿಥೇಯ ತಂಡ ಗುರುವಾರ 2–1 ಅಂತರದಿಂದ ಟಿಮ್‌ ಹೆನ್ಮನ್‌ ನೇತೃತ್ವದ ಬ್ರಿಟನ್‌ ತಂಡವನ್ನು ಸೋಲಿಸಿತು.

ರಷ್ಯಾ ತಂಡ 2–0 ಅಂತರ ದಿಂದ ಅರ್ಜೆಂಟೀನಾ ತಂಡ ವನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.

ಕಿರ್ಗಿಯೋಸ್‌ 6–2, 6–2 ರಿಂದ ಕ್ಯಾಮರಾನ್‌ ನೋರಿ ಅವರನ್ನು ಹಿಮ್ಮೆಟ್ಟಿಸಿದರು. ಆದರೆ ಡಾನ್‌ ಇವಾನ್ಸ್‌ 7–6 (7–4), 4–6, 7–6 (7–2) ರಿಂದ ಡಿ ಮಿನೋರ್‌ ಮೇಲೆ ಅಚ್ಚರಿಯ ರೀತಿ ಜಯಗಳಿಸಿದರು. ನಿರ್ಣಾಯಕ ಡಬಲ್ಸ್‌ನಲ್ಲಿ ಆಸ್ಟ್ರೇ ಲಿಯಾ ನಾಯಕ ಲೇಟನ್‌ ಹೆವಿಟ್‌, ಮಾಮೂಲಾಗಿ ಆಡುವ ಪೀರ್ಸ್‌– ಕ್ರಿಸ್‌ ಗುಸಿಯೋನ್‌ ಅವರನ್ನು ಕೈಬಿಟ್ಟು ಕಿರ್ಗಿಯೋಸ್‌–ಮಿನೋರ್‌ ಅವರನ್ನು ಕಣಕ್ಕಿಳಿಸಿದರು.

ADVERTISEMENT

ಜೇಮಿ ಮರ‍್ರೆ ಮತ್ತು ಜೋ ಸ್ಯಾಲಿಸ್ಬರಿ ಜೋಡಿ ಎದುರು ಆತಿಥೇಯರು ಡಬಲ್ಸ್‌ನ ಮೊದಲ ಸೆಟ್‌ಅನ್ನು 3–6ರಲ್ಲಿ ಸೋತಾಗ ಈ ನಿರ್ಧಾರ ದುಬಾರಿಯಾಗುವಂತೆ ಕಂಡಿತ್ತು. ಆದರೆ ಕಿರ್ಗಿಯೋಸ್‌ ಅವರ ಬಿರುಸಿನ ಸರ್ವ್‌ಗಳ ಮೂಲಕ ಆಸ್ಟ್ರೇಲಿಯಾ ಎರಡನೇ ಸೆಟ್ಟನ್ನು 6–3ರಲ್ಲಿ ಪಡೆಯಿತು. ಮೂರನೇ ಸೆಟ್‌ನಲ್ಲಿ ಆಸ್ಟ್ರೇಲಿಯಾ 18–16ರಲ್ಲಿ ಜಯಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.