
ಟ್ಯೂರಿನ್, ಇಟಲಿ: ಎರಡನೇ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರು ಭಾನುವಾರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿ ಎಟಿಪಿ ಫೈನಲ್ಸ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡರು.
2024ರ ಚಾಂಪಿಯನ್ ಆಗಿರುವ ಸಿನ್ನರ್ 7-6 (4), 7-5ರ ನೇರ ಸೆಟ್‌ಗಳಿಂದ ಸ್ಪೇನ್ ಆಟಗಾರನನ್ನು ಹಿಮ್ಮೆಟ್ಟಿಸಿದರು. ಬದ್ಧ ಎದುರಾಳಿಗಳ ಈ ಸೆಣಸಾಟದಲ್ಲಿ ತವರಿನ ಪ್ರೇಕ್ಷಕರ ಮುಂದೆ ಇಟಲಿಯ ಆಟಗಾರ ಪ್ರಭುತ್ವ ಸಾಧಿಸಿದರು.
ಉತ್ತಮ ಲಯದಲ್ಲಿರುವ ಉಭಯ ಆಟಗಾರರಿಗೆ ಪ್ರಸಕ್ತ ಋತುವಿನಲ್ಲಿ ಇದು ಆರನೇ ಬಾರಿ ಮುಖಾಮುಖಿಯಾಗಿತ್ತು. ಅದರಲ್ಲಿ ನಾಲ್ಕು ಬಾರಿ ಅಲ್ಕರಾಜ್ ಗೆದ್ದರೆ, ಎರಡು ಸಲ ಇಟಲಿಯ ಆಟಗಾರ ಗೆಲುವು ಸಾಧಿಸಿದಂತಾಗಿದೆ. ಒಟ್ಟಾರೆ ಇದು 16ನೇ ಮುಖಾಮುಖಿಯಾಗಿದ್ದು, ಅದರಲ್ಲಿ 10 ಬಾರಿ ಅಲ್ಕರಾಜ್ ಜಯ ಸಾಧಿಸಿದ್ದಾರೆ.
24 ವರ್ಷದ ಸಿನ್ನರ್ ಅವರು ಕಳೆದ ಆವೃತ್ತಿಯಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಮಣಿಸಿ ಮೊದಲ ಬಾರಿ ಎಟಿಪಿ ಫೈನಲ್ ಟ್ರೋಫಿ ಗೆದ್ದುಕೊಂಡಿದ್ದರು. 22 ವರ್ಷದ ಅಲ್ಕರಾಜ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.