ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್‌: ಸಿನ್ನರ್‌, ಅರಿನಾಗೆ ಪ್ರಶಸ್ತಿ ಉಳಿಸುವ ಗುರಿ

ಏಜೆನ್ಸೀಸ್
Published 11 ಜನವರಿ 2025, 22:51 IST
Last Updated 11 ಜನವರಿ 2025, 22:51 IST
<div class="paragraphs"><p>ಕಾಂಗರೂ ಮರಿಯೊಂದಿಗೆ ಅರಿನಾ ಸಬಲೆಂಕಾ</p></div>

ಕಾಂಗರೂ ಮರಿಯೊಂದಿಗೆ ಅರಿನಾ ಸಬಲೆಂಕಾ

   

ಮೆಲ್ಬರ್ನ್‌: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ಉದ್ದೀಪನ ಮದ್ದುಸೇವನೆ ಹಗರಣವನ್ನು ಸದ್ಯಕ್ಕೆ ಮರೆತು ಆಸ್ಟ್ರೇಲಿ ಯನ್ ಓಪನ್ ಟೆನಿಸ್‌ ಟೂರ್ನಿಯಲ್ಲಿ ನಿಕೋಲಸ್ ಜಾರ್‍ರಿ ವಿರುದ್ಧ ಆಡುವ ಮೂಲಕ ಪ್ರಶಸ್ತಿ ಅಭಿಯಾನ ಆರಂಭಿಸಲಿದ್ದಾರೆ. ಮಹಿಳಾ ವಿಭಾಗದಲ್ಲಿ ಅರಿನಾ ಸಬಲೆಂಕಾ ಅವರು ಸ್ಲೋನ್‌ ಸ್ಟೀಫನ್ಸ್‌  ವಿರುದ್ಧ ಆಡುವುದರೊಂದಿಗೆ ಹ್ಯಾಟ್ರಿಕ್ ಪ್ರಶಸ್ತಿಯೆಡೆಗೆ ಪಯಣ ನಡೆಸಲಿದ್ದಾರೆ.

15 ದಿನಗಳ ಈ ಟೂರ್ನಿ ಭಾನುವಾರ ಆರಂಭವಾಗಲಿದೆ.

ADVERTISEMENT

2024ರಲ್ಲಿ ತಮ್ಮ ಅಗ್ರಪಟ್ಟ ಬಲ ಪಡಿಸಿರುವ ಯಾನಿಕ್ ಸಿನ್ನರ್ ಅವರು ಈ ಬಾರಿ ‘ಹಾಟ್‌ ಫೇವರಿಟ್‌’ ಆಗಿದ್ದಾರೆ. ಕಳೆದ ಬಾರಿ ಅವರು ಇದೇ ಟೂರ್ನಿಯ ಫೈನಲ್‌ನಲ್ಲಿ ಎರಡು ಸೆಟ್‌ಗಳ ಹಿನ್ನ ಡೆಯಿಂದ ಪುಟಿದೆದ್ದು ರಷ್ಯಾದ ಡೇನಿ ಯಲ್ ಮೆಡ್ವೆಡೇವ್ ಅವರನ್ನು ಸೋಲಿಸಿ ಟ್ರೋಫಿ ಎತ್ತಿಹಿಡಿದಿದ್ದರು. ಸಿನ್ನರ್‌ಗೆ ಅದು ಮೊದಲ ಪ್ರಮುಖ ಪ್ರಶಸ್ತಿಯಾಗಿದ್ದು, ವರ್ಷದ ಕೊನೆಗೆ ಅವರು ಅಮೆರಿಕ ಓಪನ್‌ನಲ್ಲೂ ಪ್ರಾಬಲ್ಯ ಮೆರೆದು ಚಾಂಪಿಯನ್ ಆಗಿದ್ದರು.

23 ವರ್ಷ ವಯಸ್ಸಿನ ಸಿನ್ನರ್ ಪ್ರಾಬಲ್ಯ ಎಷ್ಟರ ಈಗ ಮಟ್ಟಿಗೆ ಇದೆ ಎಂದರೆ ಅವರಿಗೂ ಎರಡನೇ ಕ್ರಮಾಂಕದ ಅಲೆಕ್ಸಾಂಡರ್‌ ಜ್ವರೇವ್ ಅವರಿಗೂ 4000 ರ್‍ಯಾಂಕಿಂಗ್ ಪಾಯಿಂಟ್ಸ್‌ ಅಂತರವಿದೆ.

ಈ ಹಿಂದೆ ಜಾರ್‍ರಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸಿನ್ನರ್ ವಿಜ ಯಿಯಾಗಿದ್ದಾರೆ. ಬೀಜಿಂಗ್‌ನಲ್ಲಿ  ಕೊನೆಯ ಬಾರಿ (2024ರ ಸೆಪ್ಟೆಂಬರ್‌ ಎದುರಾದಾಗ ಸೆಟ್‌ ಕಳೆದುಕೊಂಡು ಚೇತರಿಸಿ ಗೆದಿದ್ದರು.

ಮಾರ್ಚ್‌ನಲ್ಲಿ ಅವರ ವಿರುದ್ಧ ಉದ್ದೀಪನ ಮದ್ದು (ಕ್ಲೋಸ್ಟ್‌ಬಾಲ್‌)ಸೇವನೆ ಕಳಂಕ ಕೇಳಿಬಂದಿತ್ತು. ಅವರಿಗೆ ಟೆನಿಸ್‌ ಇಂಟೆಗ್ರಿಟಿ ಏಜನ್ಸಿ ಕ್ಲೀನ್ ಚಿಟ್‌ ನೀಡಿದರೂ, ಇದರ ವಿರುದ್ಧ ‘ವಾಡಾ’ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದು, ಏಪ್ರಿಲ್‌ 16–17ಕ್ಕೆ ವಿಚಾರಣೆ ನಿಗದಿಯಾಗಿದೆ.

ಕಡೆಯ ನಾಲ್ಕು ಪ್ರಯತ್ನಗಳಲ್ಲಿ ಮೂರು ಬಾರಿ ಫೈನಲ್ ತಲುಪಿರುವ ಮೆಡ್ವೆಡೇವ್ ಅವರ ಮೊದಲ ಸುತ್ತಿನ ಎದುರಾಳಿ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿರುವ ಥಾಯ್ಲೆಂಡ್‌ನ ಕಸಿದಿತ್ ಸಮ್ರೆಜ್.

ಡ್ರಾದ ಇನ್ನೊಂದು ಭಾಗದಲ್ಲಿ ಹತ್ತು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಮತ್ತು ಕಾರ್ಲೊಸ್‌ ಅಲ್ಕರಾಜ್ ಇದ್ದಾರೆ. ಎಲ್ಲವೂ ನಿರೀಕ್ಷೆ ಯಂತೆ ಸಾಗಿದಲ್ಲಿ ಇವರಿಬ್ಬರು ಎಂಟರ ಘಟ್ಟದಲ್ಲಿ ಮುಖಾಮುಖಿಯಾಗಬಹುದು.

21 ವರ್ಷ ವಯಸ್ಸಿನ ಅಲ್ಕರಾಜ್ ಅವರು ಇಲ್ಲಿ ಗೆದ್ದರೆ ಎಲ್ಲ ಪ್ರಮುಖ ನಾಲ್ಕು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳನ್ನು ಗೆದ್ದಂತಾಗಲಿದೆ. ಮೆಲ್ಬರ್ನ್‌ನಲ್ಲಿ ಅವರು ಎಂದೂ ಎಂಟರ ಘಟ್ಟಕ್ಕಿಂತ ಮೇಲೆ ಏರಿಲ್ಲ.

37ರ ವಯಸ್ಸಿನಲ್ಲೂ ಗಂಭೀರ ಸವಾಲಿಗನಾಗಿರುವ ಜೊಕೊವಿಚ್‌, ಇಲ್ಲಿ 11ನೇ ಪ್ರಶಸ್ತಿಯ ಯತ್ನದಲ್ಲಿದ್ದಾರೆ. ಅವರು ಇಲ್ಲಿ ಚಾಂಪಿಯನ್ ಆದಲ್ಲಿ, ಆಸ್ಟ್ರೇಲಿಯಾದ ಆಟಗಾರ್ತಿ ಮಾರ್ಗ ರೇಟ್‌ ಕೋರ್ಟ್‌ ಅವರನ್ನು ಹಿಂದೆಹಾಕಿ 25 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ಎನಿಸಲಿದ್ದಾರೆ. ಅವರು ಅಮೆರಿಕದ ಹದಿ ಹರೆಯದ ಆಟಗಾರ, ಆಂಧ್ರ ಮೂಲದ ನಿಶೇಷ್‌ ಬಸವರೆಡ್ಡಿ ವಿರುದ್ಧ ಅಭಿಯಾನ ಆರಂಭಿಸುವರು.‌

ಮಹಿಳೆಯರ ವಿಭಾಗದಲ್ಲಿ ಮಾರ್ಟಿ ನಾ ಹಿಂಗಿಸ್ ನಂತರ (1997–99) ಸತತ ಮೂರು ವರ್ಷ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎಂಬ ಗೌರವ ಪಡೆ ಯಲು ಬೆಲಾರಸ್‌ನ ಅರಿನಾ ಸಬಲೆಂಕಾ ಪ್ರಯತ್ನ ನಡೆಸಲಿದ್ದಾರೆ.

ಮೂರನೇ ಕ್ರಮಾಂಕದ ಕೋಕೊ ಗಾಫ್‌ ಅವರು ಮೊದಲ ಸುತ್ತಿನಲ್ಲಿ 2020ರ ಚಾಂಪಿಯನ್ ಸೋಫಿಯಾ ಕೆನಿನ್ ಅವರ ಸವಾಲನ್ನು ಎದುರಿಸ ಬೇಕಿದೆ. ಪೋಲೆಂಡ್‌ನ ಆಟಗಾರ್ತಿ ಇಗಾ ಶ್ವಾಂಟೆಕ್‌ ಅವರ ಮೊದಲ ಸುತ್ತಿನ ಎದುರಾಳಿ ಡಬಲ್ಸ್‌ ಪರಿಣತೆ ಕ್ಯಾತರಿನಾ ಸಿನಿಕೋವಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.