ADVERTISEMENT

ಕೋವಿಡ್‌–19 | ಆಸ್ಟ್ರೇಲಿಯಾ ಓಪನ್ ಟೆನಿಸ್‌: ಐದು ದಿನಗಳು ಪ್ರೇಕ್ಷಕರಿಲ್ಲ

ವಿಕ್ಟೋರಿಯಾ ರಾಜ್ಯದಲ್ಲಿ ದಿಢೀರ್ ಲಾಕ್‌ಡೌನ್‌

ಏಜೆನ್ಸೀಸ್
Published 12 ಫೆಬ್ರುವರಿ 2021, 11:20 IST
Last Updated 12 ಫೆಬ್ರುವರಿ 2021, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಲ್ಬರ್ನ್‌:ವಿಕ್ಟೋರಿಯಾ ರಾಜ್ಯದ ಕ್ವಾರಂಟೈನ್‌ ಹೊಟೇಲೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ಬಳಿಕ ಶನಿವಾರ ದಿಢೀರ್‌ ಲಾಕ್‌ಡೌನ್ ಘೋಷಿಸಲಾಗಿದ್ದು, ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯು ಕನಿಷ್ಠ ಐದು ದಿನಗಳ ಕಾಲ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಯಲಿದೆ.

‘ಐದು ದಿನಗಳ ರಾಜ್ಯವ್ಯಾಪಿ ಲಾಕ್‌ಡೌನ್‌ ಸ್ಥಳೀಯ ಕಾಲಮಾನ ಮಧ್ಯರಾತ್ರಿಯಿಂದ ಆರಂಭವಾಗಿದೆ. ಇಲ್ಲಿಯ ನಿವಾಸಿಗಳು ಅಗತ್ಯ ವಸ್ತುಗಳ ಶಾಪಿಂಗ್‌, ಸೀಮಿತ ವ್ಯಾಯಾಮ, ಆರೋಗ್ಯ ಸಂಬಂಧಿ ತೊಂದರೆಗಳನ್ನು ಹೊರತುಪಡಿಸಿ ಅನಗತ್ಯವಾಗಿ ಹೊರಗೆ ಬರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದು ವಿಕ್ಟೋರಿಯಾ ರಾಜ್ಯದ ಮುಖ್ಯಸ್ಥ ಡೇನಿಯಲ್ ಆ್ಯಂಡ್ರ್ಯೂಸ್ ಹೇಳಿದ್ದಾರೆ.

ಸೋಮವಾರದಿಂದ ಬುಧವಾರದವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕ್ರೀಡಾಕೂಟಗಳು, ವಿವಾಹ, ಧಾರ್ಮಿಕ ಮತ್ತಿತರ ಸಮಾರಂಭಗಳಿಗೆ ಜನ ಸೇರುವುದಕ್ಕೆ ನಿರ್ಬಂಧ ಹೇರಲಾಗಿದೆ. ಎಲ್ಲೆಡೆ ಮಾಸ್ಕ್‌ಗಳನ್ನು ಕಡ್ಡಾಯ ಮಾಡಲಾಗಿದೆ.

ADVERTISEMENT

‘ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆಡುವ ಆಟಗಾರರು ಹಾಗೂ ಸಿಬ್ಬಂದಿ ತಮ್ಮದೇ ಆದ ವಸತಿ ವ್ಯವಸ್ಥೆಯಲ್ಲಿರುವುದರಿಂದ ಟೂರ್ನಿ ಮುಂದುವರಿಯಲಿದೆ. ಆದರೆ ಪ್ರೇಕ್ಷಕರು ಇರುವುದಿಲ್ಲ. ಟೂರ್ನಿ ನಡೆಸುವುದು ಸುರಕ್ಷಿತವಲ್ಲ ಎಂಬ ಆಧಾರದ ಮೇಲೆ ರದ್ದು ಮಾಡಬೇಕೆಂದು ನಾನು ಹೇಳುವುದಿಲ್ಲ‘ ಎಂದು ಡೇನಿಯಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.