ADVERTISEMENT

ಟೆನಿಸ್‌ಗೆ ಬೆರ್ಡಿಚ್‌ ವಿದಾಯ

ಏಜೆನ್ಸೀಸ್
Published 17 ನವೆಂಬರ್ 2019, 20:17 IST
Last Updated 17 ನವೆಂಬರ್ 2019, 20:17 IST
ಥಾಮಸ್‌ ಬೆರ್ಡಿಚ್‌–ಎಎಫ್‌ಪಿ ಚಿತ್ರ
ಥಾಮಸ್‌ ಬೆರ್ಡಿಚ್‌–ಎಎಫ್‌ಪಿ ಚಿತ್ರ   

ಲಂಡನ್‌: ಜೆಕ್‌ ಗಣರಾಜ್ಯದ ಆಟಗಾರ ಥಾಮಸ್‌ ಬೆರ್ಡಿಚ್‌ ಶನಿವಾರ ಅಂತರರಾಷ್ಟ್ರೀಯ ಟೆನಿಸ್‌ಗೆ ವಿದಾಯ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್ ಟೂರ್ನಿಯ ವೇಳೆ ಅವರು ತಮ್ಮ 17 ವರ್ಷಗಳ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದರು.

ವಿಶ್ವದ 103ನೇ ಕ್ರಮಾಂಕದ ಬೆರ್ಡಿಚ್‌, 13 ಪ್ರಶಸ್ತಿಗಳನ್ನು ಜಯಿಸಿದ್ದಾರೆ. 2015ರಲ್ಲಿ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು. ಜುಲೈ 2010ರಿಂದ ಅಕ್ಟೋಬರ್‌ 2016ರವರೆಗೆ ಅಗ್ರ 10ರ ಕ್ರಮಾಂಕದಲ್ಲಿದ್ದರು. ಹೋದ ಎರಡು ವರ್ಷಗಳಿಂದ ಬೆನ್ನುನೋವಿನಿಂದ ಬಳಲಿದ್ದರು.

34 ವರ್ಷದ ಬೆರ್ಡಿಚ್‌ ಒಮ್ಮೆಯೂ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿಲ್ಲ. 2010ರ ವಿಂಬಲ್ಡನ್‌ ಟೂರ್ನಿಯಲ್ಲಿ ಪ್ರಮುಖ ಆಟಗಾರರಾದ ನೊವಾಕ್‌ ಜೊಕೊವಿಚ್‌ ಹಾಗೂ ರೋಜರ್‌ ಫೆಡರರ್‌ ಅವರಿಗೆ ಸೋಲುಣಿಸಿದ್ದ ಅವರು ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಆದರೆ ರಫೆಲ್‌ ನಡಾಲ್‌ ಎದುರು ಸೋಲು ಎದುರಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.