ADVERTISEMENT

ಎಟಿಪಿ ಟೆನಿಸ್‌ ಟೂರ್ನಿ| ಬೋಪಣ್ಣ ಜೋಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 10:26 IST
Last Updated 3 ಅಕ್ಟೋಬರ್ 2022, 10:26 IST
ಪ್ರಶಸ್ತಿಯೊಂದಿಗೆ ರೋಹನ್‌ ಬೋಪಣ್ಣ ಮತ್ತು ಮಿಡ್ಲ್‌ಕೂಪ್‌ –ಎಎಫ್‌ಪಿ ಚಿತ್ರ
ಪ್ರಶಸ್ತಿಯೊಂದಿಗೆ ರೋಹನ್‌ ಬೋಪಣ್ಣ ಮತ್ತು ಮಿಡ್ಲ್‌ಕೂಪ್‌ –ಎಎಫ್‌ಪಿ ಚಿತ್ರ   

ನವದೆಹಲಿ: ಭಾರತದ ರೋಹನ್‌ ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ಮಟ್ವೆ ಮಿಡ್ಲ್‌ಕೂಪ್‌ ಜೋಡಿ ಟೆಲ್‌ ಅವೀವ್‌ನಲ್ಲಿ ನಡೆದ ಎಟಿಪಿ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು.

ಭಾನುವಾರ ನಡೆದ ಫೈನಲ್‌ನಲ್ಲಿ ಬೋಪಣ್ಣ– ಮಿಡ್ಲ್‌ಕೂಪ್‌ 6-2, 6-4 ರಲ್ಲಿ ಮೆಕ್ಸಿಕೊದ ಸಾಂಟಿಯಾಗೊ ಗೊನ್ಸಾಲೆಸ್‌ ಮತ್ತು ಆರ್ಜೆಂಟೀನಾದ ಆಂಡ್ರೆಸ್‌ ಮಲ್ಟೆನಿ ಅವರನ್ನು ಮಣಿಸಿದರು. ಎರಡೂ ಸೆಟ್‌ಗಳಲ್ಲಿ ಸೊಗಸಾದ ಆಟವಾಡಿ, ಒಂದು ಗಂಟೆ 12 ನಿಮಿಷಗಳಲ್ಲಿ ಗೆದ್ದರು.

42 ವರ್ಷದ ಬೋಪಣ್ಣ ಅವರಿಗೆ ಈ ಋತುವಿನಲ್ಲಿ ದೊರೆತ ಮೂರನೇ ಪ್ರಶಸ್ತಿ ಇದು. ಈ ಹಿಂದೆ ಅವರು ಭಾರತದ ರಾಮಕುಮಾರ್‌ ರಾಮನಾಥನ್‌ ಜತೆ ಅಡಿಲೇಡ್‌ ಮತ್ತು ಪುಣೆಯಲ್ಲಿ ನಡೆದ ಟೂರ್ನಿಯನ್ನು ಜಯಿಸಿದ್ದರು. ಮಿಡ್ಲ್‌ಕೂಪ್‌ ಅವರೊಂದಿಗೆ ಸೇರಿ ಬೋಪಣ್ಣ ಜಯಿಸಿದ ಮೊದಲ ಟ್ರೋಫಿ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.