ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಎಂಟರಘಟ್ಟದಲ್ಲಿ ಎಡವಿದ ಬೋಪಣ್ಣ–ಶಪೊವಲೊವ್‌

ಪಿಟಿಐ
Published 8 ಸೆಪ್ಟೆಂಬರ್ 2020, 14:01 IST
Last Updated 8 ಸೆಪ್ಟೆಂಬರ್ 2020, 14:01 IST
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ   

ನ್ಯೂಯಾರ್ಕ್‌: ಅಮೆರಿಕ ಓಪನ್‌ ಟೆನಿಸ್ ಟೂರ್ನಿಯಲ್ಲಿ‌ ಭಾರತದ ಸವಾಲು ಅಂತ್ಯವಾಗಿದೆ. ಏಕೈಕ ಭರವಸೆಯಾಗಿದ್ದ ರೋಹನ್‌ ಬೋಪಣ್ಣ ಹಾಗೂ ಅವರ ಜೊತೆಗಾರ ಕೆನಡಾದ ಡೆನಿಸ್‌ ಶಪೊವಲೊವ್‌ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ ಸೋಲು ಅನುಭವಿಸಿದ್ದಾರೆ.

ಬೋಪಣ್ಣ–ಶಪೊವಲೊವ್‌ ಅವರು 5–7, 5–7ರಿಂದ ನೆದರ್ಲೆಂಡ್ಸ್‌ನ ಜೀನ್‌ ಜೂಲಿಯನ್ ರೋಜರ್‌ ಹಾಗೂ ರುಮೇನಿಯಾದ ಹೊರಿಯಾ ಟೆಕಾವು ಜೋಡಿಯ ಎದುರು ಪರಾಭವಗೊಂಡರು. ಸೋಮವಾರ ರಾತ್ರಿ ನಡೆದ ಈ ಪಂದ್ಯ 1 ತಾಸು 26 ನಿಮಿಷಗಳಲ್ಲಿ ಮುಗಿಯಿತು.

ಪ್ರತಿ ಸೆಟ್‌ನಲ್ಲಿ ಒಂದು ಸರ್ವ್‌ಅನ್ನು ಭಾರತ–ಕೆನಡಾ ಜೋಡಿ ಕೈಚೆಲ್ಲಿತು. ಅಲ್ಲದೆ ಎರಡನೇ ಸೆಟ್‌ನಲ್ಲಿ ಸಿಕ್ಕ ಏಕೈಕ್‌ ಬ್ರೇಕ್‌ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದರು.

ADVERTISEMENT

2018ರ ಫ್ರೆಂಚ್‌ ಓಪನ್ ಹಾಗೂ ಅಮೆರಿಕ ಓಪನ್‌ ಟೂರ್ನಿಗಳಲ್ಲೂ ಬೋಪಣ್ಣ ಕ್ವಾರ್ಟರ್‌ಫೈನಲ್‌ ತಲುಪಿದ್ದರು.

ಭಾರತದ ದಿವಿಜ್ ಶರಣ್(ಡಬಲ್ಸ್‌ ವಿಭಾಗ) ಹಾಗೂ ಸುಮಿತ್‌ ನಗಾಲ್‌ (ಸಿಂಗಲ್ಸ್‌) ಅವರು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.