
ಅರಿನಾ ಸಬಲೆಂಕಾ
ರಾಯಿಟರ್ಸ್ ಚಿತ್ರ
ಬ್ರಿಸ್ಬೇನ್: ವಿಶ್ವದ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರ್ತಿ ಅರಿನಾ ಸಬಲೆಂಕಾ ಅವರು ನೇರ ಸೆಟ್‌ಗಳಲ್ಲಿ ಉಕ್ರೇನ್‌ನ ಮಾರ್ತಾ ಕೊಸ್ಟಿಯುಕ್ ಅವರನ್ನು ಮಣಿಸಿ ಸತತ ಎರಡನೇ ಬಾರಿಗೆ ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಗೆದ್ದುಕೊಂಡರು.
ಕ್ವೀನ್ಸ್‌ಲ್ಯಾಂಡ್ ಟೆನಿಸ್ ಸೆಂಟರ್ ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಬೆಲಾರೂಸ್‌ನ ಆಟಗಾರ್ತಿ 6–4, 6–3 ರಿಂದ ಗೆದ್ದರು. ಅದರೊಂದಿಗೆ, ಇದೇ 18ರಂದು ಆರಂಭವಾಗಲಿರುವ ವರ್ಷದಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ‘ಆಸ್ಟ್ರೇಲಿಯಾ ಓಪನ್’ಗೆ ಭರ್ಜರಿ ಯಾಗಿಯೇ ಸಿದ್ಧತೆ ಆರಂಭಿಸಿದರು.
ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದ ಲ್ಲಿರುವ ರಷ್ಯಾದ ಆಟಗಾರ ಡೇನಿಯಲ್ ಮೆಡ್ವೆಡೇವ್ ಅವರು ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. 96 ನಿಮಿಷ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮೆಡ್ವೆಡೇವ್ 6–2, 7–6 (7–1) ರಿಂದ ಅಮೆರಿಕದ ಬ್ರಾಂಡನ್ ನಕಾಶಿಮಾ ಅವರನ್ನು ಮಣಿಸಿದರು.
ಅಗ್ರ 10ರಲ್ಲಿ ಬುಬ್ಲಿಕ್: ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರು ಭಾನುವಾರ ನಡೆದ ಹಾಂಗ್‌ಕಾಂಗ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ 7–6 (7–2), 6–3ರಿಂದ ನೇರ ಸೆಟ‌್ಗಳಲ್ಲಿ ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ ಗೆದ್ದರು. ಈ ಟ್ರೋಫಿಯೊಂದಿಗೆ ಅವರು ಮೊದಲ ಬಾರಿಗೆ ವಿಶ್ವ ರ್‍ಯಾಂಕಿಂಗ್‌ನ ಅಗ್ರ 10ರಲ್ಲಿ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.