ADVERTISEMENT

ಸಿಎಸ್‌3 ಟೆನಿಸ್ ಟೂರ್ನಿ: ಸೆಮಿಫೈನಲ್‌ ಪ್ರವೇಶಿಸಿದ ಕೆವಿನ್‌, ದಿಶಾ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:30 IST
Last Updated 20 ಅಕ್ಟೋಬರ್ 2021, 16:30 IST
ದಿಶಾ ಸಂತೋಷ್ ಚೆಂಡನ್ನು ರಿಟರ್ನ್ ಮಾಡಿದ ಪರಿ
ದಿಶಾ ಸಂತೋಷ್ ಚೆಂಡನ್ನು ರಿಟರ್ನ್ ಮಾಡಿದ ಪರಿ   

ಬೆಂಗಳೂರು: ದಿಶಾ ಸಂತೋಷ್ ಮತ್ತು ಕೆವಿನ್ ಟೈಟಸ್‌ ಇಲ್ಲಿ ನಡೆಯುತ್ತಿರುವ ಎಎಸ್‌ಟಿಎ–ಎಐಟಿಎ ಸಿಎಸ್‌3 18 ವರ್ಷದೊಳಗಿನವರಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ಎಫ್‌ಎಸ್‌ಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ದಿಶಾ ಸಂತೋಶ್ ಏಳನೇ ಶ್ರೇಯಾಂಕದ ನಿಧಿ ಬುವಿಲ ವಿರುದ್ಧ 9–8 (10–8) ಜಯ ಗಳಿಸಿದರು. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ತಮಗಿಂತ ಹೆಚ್ಚು ಶ್ರೇಯಾಂಕ ಹೊಂದಿರುವವರನ್ನು ಮಣಿಸಿದ ಶ್ರೇಯಸ್ಸಿಗೆ ಪಾತ್ರರಾದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಅವರುಎರಡನೇ ಶ್ರೇಯಾಂಕದ ಸಂಜಿತಾ ರಮೇಶ್ ವಿರುದ್ಧ 9-8 (8-6)ರಲ್ಲಿ ಗೆದ್ದಿದ್ದರು.

ಬಾಲಕರ ವಿಭಾಗದಲ್ಲಿ ಕೆವಿನ್ ಟೈಟಸ್ ಪಾರಮ್ಯ ಮೆರೆದರು. ಎಂಟರ ಘಟ್ಟದ ಹಣಾಹಣಿಯಲ್ಲಿ ಅವರು ಎಂಟನೇ ಶ್ರೇಯಾಂಕದ ತನಿಷ್ ಘಿಲ್ಡಿಯಾಳ್‌ ಎದುರು 9-8 (10-8) ಅಂತರದಲ್ಲಿ ಜಯ ಸಾಧಿಸಿದರು. ಅಕ್ಷಯ್ ಪ್ರಸಾದ್ 9–7ರಲ್ಲಿ ಮೈಕೆಲ್ ಡೇವಿಡ್ ವಿರುದ್ಧ ಗೆಲುವು ದಾಖಲಿಸಿದರು. ಪ್ರಿಯಾಂಶ್ ಸೋಲಂಕಿ 9–4ರಲ್ಲಿ ಆದಿತ್ಯ ಮೋಹಪಾತ್ರ ವಿರುದ್ಧ ಮತ್ತು ಸೆಹಜ್ ಸಿಂಗ್ ಪವಾರ್ 8–3ರಲ್ಲಿ ಸುಶಾಂಕ ಬಿ.ಎಸ್‌ ವಿರುದ್ಧ ಗೆದ್ದರು.

ADVERTISEMENT

ಬಾಲಕಿಯರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಆತ್ಮಿಕ ಶ್ರೀನಿವಾಸ 9–1ರಲ್ಲಿ ಕಾಜಲ್ ರಮಿಸೆಟ್ಟಿ ವಿರುದ್ಧ, ಕಾಶಿಶ್ ಕಾಂತ್ 9–1ರಲ್ಲಿ ಸುರಭಿ ಶ್ರೀನಿವಾಸ ವಿರುದ್ಧ, ಪ್ರೇಶಾ ಶಾಂತಮೂರ್ತಿ 9–1ರಲ್ಲಿ ಸುಬ್ರತಾ ಶುಭ್ರಾಂಜಲಿ ವಿರುದ್ಧ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.