ADVERTISEMENT

ಆಸ್ಟ್ರೇಲಿಯಾ ಓಪನ್‌: ಮುಖ್ಯ ಸುತ್ತಿನಲ್ಲಿ ಜೊಕೊವಿಚ್‌

ಏಜೆನ್ಸೀಸ್
Published 13 ಜನವರಿ 2022, 19:31 IST
Last Updated 13 ಜನವರಿ 2022, 19:31 IST
ನೊವಾಕ್‌ ಜೊಕೊವಿಚ್‌– ರಾಯಿಟರ್ಸ್ ಚಿತ್ರ
ನೊವಾಕ್‌ ಜೊಕೊವಿಚ್‌– ರಾಯಿಟರ್ಸ್ ಚಿತ್ರ   

ಮೆಲ್ಬರ್ನ್‌: ವಿಶ್ವದ ಅಗ್ರಕ್ರಮಾಂಕದ ಟೆನಿಸ್‌ ಆಟಗಾರ ನೊವಾಕ್ ಜೊಕೊವಿಚ್‌ ಅವರು ಅನಿಶ್ಚಿತತೆಯ ನಡುವೆಯೂ ಆಸ್ಟ್ರೇಲಿಯಾ ಓಪನ್ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ಸರ್ಬಿಯಾದ ಆಟಗಾರ ಮೊದಲ ಸುತ್ತಿನಲ್ಲಿ ತಮ್ಮದೇ ದೇಶದ ಮಿಯೊಮಿರ್‌ ಕೆಸ್ಮೊನೊವಿಚ್‌ ಅವರನ್ನು ಎದುರಿಸಲಿದ್ದಾರೆ.

ಟೂರ್ನಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಡ್ರಾಗಳನ್ನು ನಿರ್ಧರಿಸುವುದನ್ನು 75 ನಿಮಿಷಗಳ ಕಾಲ ಮುಂದೂಡಲಾಗಿತ್ತು. ಡ್ರಾ ಪ್ರಕಟವಾಗುವ ಕೊನೆಯ ಕ್ಷಣದವರೆಗೂ ಜೊಕೊವಿಕ್ ಅವರ ವೀಸಾ ಸಂಗತಿಯೇ ಎಲ್ಲರ ಗಮನಸೆಳೆದಿತ್ತು.

ADVERTISEMENT

ಇದಾದ ಬಳಿಕವೂ ಜೊಕೊವಿಚ್‌ ಇನ್ನೂ ಅತಂತ್ರ ಸ್ಥಿತಿಯಲ್ಲೇ ಇದ್ದಾರೆ.ಕೋವಿಡ್‌ ಲಸಿಕೆ ತೆಗೆದುಕೊಳ್ಳದ, ಒಂಬತ್ತು ಬಾರಿ ಪ್ರಶಸ್ತಿ ವಿಜೇತ ಮತ್ತು ಹಾಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್‌ ಅವರನ್ನು ಗಡೀಪಾರು ಮಾಡಬೇಕೇ ಎಂಬ ವಿಷಯ ಇನ್ನೂ ಪರಿಗಣನೆಯಲ್ಲಿದೆ ಎಂದು ಆಸ್ಟ್ರೇಲಿಯಾದ ಇಮಿಗ್ರೇಷನ್ ಸಚಿವರು ಹೇಳಿದ್ದಾರೆ.

ಮುಂದಿನ ಸೋಮವಾರದಿಂದ ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಗಳು ನಡೆಯಬೇಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.