ADVERTISEMENT

ಜೂನಿಯರ್ ಫ್ರೆಂಚ್ ಓ‍ಪನ್‌ ಮುಖ್ಯ ಸುತ್ತಿಗೆ ದೇವ್ ಜವಿಯಾ

ಪಿಟಿಐ
Published 9 ಅಕ್ಟೋಬರ್ 2020, 14:24 IST
Last Updated 9 ಅಕ್ಟೋಬರ್ 2020, 14:24 IST
ದೇವ್ ಜವಿಯಾ (ಮಧ್ಯದಲ್ಲಿರುವವರು) –ಪಿಟಿಐ ಚಿತ್ರ
ದೇವ್ ಜವಿಯಾ (ಮಧ್ಯದಲ್ಲಿರುವವರು) –ಪಿಟಿಐ ಚಿತ್ರ   

ಪ್ಯಾರಿಸ್: ಭಾರತದ ದೇವ್ ಜವಿಯಾ ಅವರು ಜೂನಿಯರ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್‌ ವಿಭಾಗದ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನ ಎರಡೂ ಪಂದ್ಯಗಳಲ್ಲಿ ‍ಪಾರಮ್ಯ ಮೆರೆದು ಅವರು ಈ ಸಾಧನೆ ಮಾಡಿದರು.

ವಡೋದರಾದವರಾದ 18 ವರ್ಷದ ದೇವ್‌ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಮೆಕ್ಸಿಕೊದ ಎಮಿಲಿಯಾನೊ ಅಂಜಿಲೆರೊ ಎದುರು 6–2, 3–6, 10–8 ಅಂತರದ ಗೆಲುವು ಸಾಧಿಸಿದರು. ಮೊದಲ ಪಂದ್ಯದಲ್ಲಿ ಅವರು ಬ್ರೆಜಿಲ್‌ನ ನಿಕೋಲಸ್ ಮಾರ್ಕೊಂಡೆಜ್ ಜನೆಲಟೊ ವಿರುದ್ಧ0-6, 6-1, 10-4ರಲ್ಲಿ ಜಯ ಗಳಿಸಿದ್ದರು.

ಈ ವರ್ಷದ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆದಿದ್ದ ಅರ್ಹತಾ ಟೂರ್ನಿಯಾದ ’ರೋಲೆಂಡ್ ಗ್ಯಾರೋಸ್ ಜೂನಿಯರ್ ವೈಲ್ಡ್ ಕಾರ್ಡ್ ಸಿರೀಸ್’ನಲ್ಲಿ ಜಯ ಸಾಧಿಸಿದ್ದರು.

ADVERTISEMENT

ಫ್ರೆಂಚ್ ಓಪನ್‌ನ ಜೂನಿಯರ್ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತು ಪ್ರವೇಶಿಸಿದ ಭಾರತದ ಎರಡನೇ ಆಟಗಾರ ದೇವ್. 2017ರಲ್ಲಿ ಅಭಿಮನ್ಯು ವನ್ನೆಮ್‌ ‌ರೆಡ್ಡಿ ಅರ್ಹತೆ ಗಳಿಸಿದ್ದರು. ಫ್ರೆಂಚ್ ಓಪನ್ ಜೂನಿಯರ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಭಾರತ, ಬ್ರೆಜಿಲ್ ಮತ್ತು ಮೆಕ್ಸಿಕೊದಲ್ಲಿ ನಡೆದಿದ್ದವು. ಮೆಕ್ಸಿಕೊ ಇದೇ ಮೊದಲ ಬಾರಿ ಜೂನಿಯರ್ ಅರ್ಹತಾ ಟೂರ್ನಿಗೆ ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.