
ಜೀವಿತ್ ಸತೀಶ್
ಬೆಂಗಳೂರು: ಕರ್ನಾಟಕದ ಜೀವಿತ್ ಸತೀಶ್ ಅವರು ಇಲ್ಲಿ ನಡೆಯುತ್ತಿರುವ ಸಿಆರ್‌ಎಸ್ ಟ್ರಸ್ಟ್ ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್ ಸರಣಿ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
ಎರಡನೇ ಶ್ರೇಯಾಂಕದ ಜೀವಿತ್ ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ 6-2, 6-1ರ ನೇರ ಸೆಟ್‌ಗಳಿಂದ ಎಂಟು ಶ್ರೇಯಾಂಕದ ಅಧಿದನ್ (ತಮಿಳುನಾಡು) ಅವರನ್ನು ಮಣಿಸಿದರು. ನಿಕಟ ಪೈಪೋಟಿ ಕಂಡ ಮತ್ತೊಂದು ಪಂದ್ಯದಲ್ಲಿ ತನೀಶ್ ದನ್ಸಾರಿ ಅವರು 6-4, 3-6, 6-4 ಅಂತರದಿಂದ ತನಯ್ ಬಾಬು ಪೈ ಅವರನ್ನು ಸೋಲಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.
ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಅನಿಷ್ಕಾ ಝಾ (ಉತ್ತರಪ್ರದೇಶ) 6-3,6-4ರಿಂದ ಆರನೇ ಶ್ರೇಯಾಂಕದ ಖುಷಿ ಬುಧ್ಯಾ ಅವರನ್ನು ಮಣಿಸಿದರು. ಐದನೇ ಶ್ರೇಯಾಂಕದ ಪ್ರೀತಿ ಪಿ. 6–3, 6–4ರಿಂದ ಮೂರನೇ ಶ್ರೇಯಾಂಕದ ವೀಣಾ ಶಿವರಾಮನ್ ಅವರಿಗೆ ಆಘಾತ ನೀಡಿ ಸೆಮಿಫೈನಲ್ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.