ADVERTISEMENT

ಫ್ರೆಂಚ್ ಓಪನ್: ಕೆನಿನ್–ಸ್ವಾಟೆಕ್ ಫೈನಲ್‌ ಹಣಾಹಣಿ

ಏಜೆನ್ಸೀಸ್
Published 9 ಅಕ್ಟೋಬರ್ 2020, 3:52 IST
Last Updated 9 ಅಕ್ಟೋಬರ್ 2020, 3:52 IST
ಸೋಫಿಯಾ ಕೆನಿನ್ –ರಾಯಿಟರ್ಸ್‌ ಚಿತ್ರ
ಸೋಫಿಯಾ ಕೆನಿನ್ –ರಾಯಿಟರ್ಸ್‌ ಚಿತ್ರ   

ಪ್ಯಾರಿಸ್: ಅಮೆರಿಕದ ಸೋಫಿಯಾ ಕೆನಿನ್ ಮತ್ತು ಪೋಲೆಂಡ್‌ನ ಐಗಾ ಸ್ವಾಟೆಕ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಶನಿವಾರ ಸೆಣಸುವರು.

ಗುರುವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಸೋಫಿಯಾ ಅವರು ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು 6–4,7–5ರಲ್ಲಿ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ 19 ವರ್ಷದ ಐಗಾ ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದ ಅರ್ಜೆಂಟೀನಾದ ನಾದಿಯಾ ಪೊಡೊರೊಸ್ಕಾ ವಿರುದ್ಧ 6–2, 6–1ರಲ್ಲಿ ಗೆಲುವು ಸಾಧಿಸಿದರು. ಈ ಮೂಲಕ 81 ವರ್ಷಗಳ ನಂತರ ರೋಲೆಂಡ್ ಗ್ಯಾರೋಸ್‌ನಲ್ಲಿ ಮಹಿಳೆಯರ ಫೈನಲ್ ಪ್ರವೇಶಿಸಿದ ಪೋಲೆಂಡ್‌ನ ಮೊದಲ ಆಟಗಾರ್ತಿ ಎನಿಸಿದರು.

ವರ್ಷಾರಂಭದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ 21 ವರ್ಷದ ಸೋಫಿಯಾ ಕೆನಿನ್‌ಗೆ ಇಲ್ಲಿ ನಾಲ್ಕನೇ ಶ್ರೇಯಾಂಕ ನೀಡಲಾಗಿತ್ತು. ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಏಳನೇ ಶ್ರೇಯಾಂಕ ಹೊಂದಿದ್ದರು. ಎರಡನೇ ಸೆಟ್‌ನಲ್ಲಿ 5–4ರ ಮುನ್ನಡೆ ಗಳಿಸಿ ಸರ್ವ್‌ಗೆ ಮುಂದಾಗಿದ್ದಾಗ ಕೆನಿನ್ ತಪ್ಪು ಎಸಗಿದರು. ಇದರ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ ಕ್ವಿಟೋವಾ ಎಡವಿದರು. ಮುಂದಿನ ಗೇಮ್‌ನಲ್ಲಿ ಅವರ ಸರ್ವ್ ಅನ್ನು ಕೆನಿನ್‌ ಮುರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.