ADVERTISEMENT

ಲಕ್ಸೆಂಬರ್ಗ್‌ ಓಪನ್ ಟೆನಿಸ್ ಟೂರ್ನಿ: ಸಾನಿಯಾ, ಶುಯಿ ಜಾಂಗ್ ಸೋಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:39 IST
Last Updated 17 ಸೆಪ್ಟೆಂಬರ್ 2021, 16:39 IST
ಸಾನಿಯಾ
ಸಾನಿಯಾ   

ಬೆಂಗಳೂರು: ಭಾರತದ ಸಾನಿಯಾ ಮಿರ್ಜಾ ಹಾಗೂ ಚೀನಾದ ಶುಯಿ ಜಾಂಗ್ ಜೋಡಿಯು ಲಕ್ಸೆಂಬರ್ಗ್‌ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಗುರುವಾರ ಲಕ್ಸೆಂಬರ್ಗ್‌ನಲ್ಲಿ ನಡೆದ ಮಹಿಳಾ ಡಬಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ಈ ಜೋಡಿಯು 6–3, 3–6, 8–10ರಿಂದ ಬೆಲ್ಜಿಯಂನ ಗ್ರೀಟ್‌ ಮಿನ್ನೆನ್‌–ಅಲಿಸನ್ ವ್ಯಾನ್‌ ಉತ್ವಂಕ್‌ ಎದುರು ನಿರಾಸೆ ಅನುಭವಿಸಿತು. ಬೆಲ್ಜಿಯಂ ಆಟಗಾರ್ತಿಯರು ಶ್ರೇಯಾಂಕರಹಿತರಾಗಿದ್ದರು. ಒಂದು ತಾಸು 11 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು.

ಮೊದಲ ಸೆಟ್‌ ಗೆದ್ದು ಭರವಸೆ ಮೂಡಿಸಿದ್ದ ಸಾನಿಯಾ–ಜಾಂಗ್‌ಗೆ ಅದೇ ಲಯ ಮುಂದುವರಿಸಲು ಸಾಧ್ಯವಾಗಲಿಲ್ಲ. 16ರ ಘಟ್ಟದ ಪಂದ್ಯದಲ್ಲಿ ಭಾರತ–ಚೀನಾ ಆಟಗಾರ್ತಿಯರು ಜರ್ಮನಿಯ ಸಹೋದರಿಯರಾದ ತಯಿಸಿಯಾ ಮೊರ್ದರ್ಗರ್‌ ಮತ್ತು ಯಾನಾ ಅವರನ್ನು ಸೋಲಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.