ADVERTISEMENT

ಡೇವಿಸ್‌ ಕಪ್: ಯೂಕಿಗೆ ಸ್ಥಾನ; ಸುಮಿತ್‌ಗೆ ಇಲ್ಲ ಅವಕಾಶ

ಡೆನ್ಮಾರ್ಕ್‌ ವಿರುದ್ಧದ ಡೇವಿಸ್‌ ಕಪ್ ಟೆನಿಸ್‌ ಪಂದ್ಯ

ಪಿಟಿಐ
Published 2 ಫೆಬ್ರುವರಿ 2022, 10:26 IST
Last Updated 2 ಫೆಬ್ರುವರಿ 2022, 10:26 IST
ಯೂಕಿ ಭಾಂಬ್ರಿ– ಎಎಫ್‌ಪಿ ಚಿತ್ರ
ಯೂಕಿ ಭಾಂಬ್ರಿ– ಎಎಫ್‌ಪಿ ಚಿತ್ರ   

ನವದೆಹಲಿ:ಡೆನ್ಮಾರ್ಕ್ ವಿರುದ್ಧ ಮುಂದಿನ ತಿಂಗಳು ಇಲ್ಲಿ ನಡೆಯಲಿರುವಡೇವಿಸ್‌ ಕಪ್‌ ವಿಶ್ವ ಗುಂಪು ಒಂದರ ಪ್ಲೇ-ಆಫ್ ಪಂದ್ಯಕ್ಕಾಗಿ ಐದು ಮಂದಿಯ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸುಮಿತ್ ನಗಾಲ್ ಅವರನ್ನು ಕೈಬಿಟ್ಟು ಯೂಕಿ ಭಾಂಬ್ರಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ‘ ಎಂದು ರಾಷ್ಟ್ರೀಯ ಟೆನಿಸ್ ಫೆಡರೇಷನ್‌ ಬುಧವಾರ ತಿಳಿಸಿದೆ.

ದೆಹಲಿ ಜಿಮ್‌ಖಾನ ಕ್ಲಬ್‌ನಲ್ಲಿ ಮಾರ್ಚ್‌ 4 ಮತ್ತು 5ರಂದು ಬಯೋಬಬಲ್ ವ್ಯವಸ್ಥೆಯಲ್ಲಿ ಪಂದ್ಯ ನಡೆಯಲಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 863ನೇ ಸ್ಥಾನದಲ್ಲಿರುವ ಯೂಕಿ, ರಾಮ್‌ಕುಮಾರ್ ರಾಮನಾಥನ್‌ (182) ಮತ್ತು ಪ್ರಜ್ಞೇಶ್ ಗುಣೇಶ್ವರನ್ (228) ಅವರು ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ.

ADVERTISEMENT

ಗ್ರಾಸ್‌ಕೋರ್ಟ್‌ನಲ್ಲಿ ಆಡುವ ಪರಿಣಿತಿ ಹೊಂದಿರುವುದರಿಂದ ರಾಮ್‌ಕುಮಾರ್‌ ಮತ್ತು ಯೂಕಿ ಅವರನ್ನು ಆಯ್ಕೆ ಮಾಡಲಾಗಿದೆ.

ಡಬಲ್ಸ್ ಪರಿಣತ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ತಂಡದಲ್ಲಿರುವ ಇನ್ನಿಬ್ಬರು ಆಟಗಾರರು. ಸಾಕೇತ್ ಮೈನೇನಿ ಮತ್ತು ದಿಗ್ವಿಜಯ್‌ ಪ್ರತಾಪ್ ಸಿಂಗ್ ಅವರನ್ನು ಕಾಯ್ದಿರಿಸಿದ ಆಟಗಾರರಾಗಿದ್ದಾರೆ.ಆಟವಾಡದ ನಾಯಕ ರೋಹಿತ್ ರಾಜ್‌ಪಾಲ್ ಮತ್ತು ಮುಖ್ಯ ಕೋಚ್‌ ಜೀಶನ್ ಅಲಿ ತಂಡದಲ್ಲಿದ್ದಾರೆ.

ಜನವರಿ 29ರಂದು ತಂಡದ ಆಯ್ಕೆಗಾಗಿ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ವರ್ಚುವಲ್ ಸಭೆ ನಡೆಸಿತ್ತು. ಅಧ್ಯಕ್ಷ ನಂದನ್ ಬಾಲ್‌, ಸದಸ್ಯರಾದ ಬಲರಾಮ್ ಸಿಂಗ್, ಮುಸ್ತಫಾ ಗೌಸ್‌, ಸಾಯಿ ಜಯಲಕ್ಷ್ಮಿ, ರಾಜ್‌ಪಾಲ್‌, ಜೀಶನ್ ಅಲಿ ಮತ್ತು ಎಐಟಿಎ ಪ್ರಧಾನ ಕಾರ್ಯದರ್ಶಿ ಅನಿಲ್ ಧುಪರ್ ಸಭೆಯಲ್ಲಿದ್ದರು.

ಫೆಬ್ರುವರಿ 23ರಂದು ತಂಡವು ದೆಹಲಿಯಲ್ಲಿ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.