ADVERTISEMENT

ಟೆನಿಸ್‌: ನಿನಾದ್‌ ಜೋಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 18:44 IST
Last Updated 28 ಡಿಸೆಂಬರ್ 2018, 18:44 IST
ಪ್ರಶಸ್ತಿಯೊಂದಿಗೆ ಗೋವಿಂದ ಸೆಹ್ವಾಗ್‌ (ಎಡ) ಮತ್ತು ನಿನಾದ್‌ ರವಿ ಸಂಭ್ರಮ
ಪ್ರಶಸ್ತಿಯೊಂದಿಗೆ ಗೋವಿಂದ ಸೆಹ್ವಾಗ್‌ (ಎಡ) ಮತ್ತು ನಿನಾದ್‌ ರವಿ ಸಂಭ್ರಮ   

ಬೆಂಗಳೂರು: ಅಮೋಘ ಆಟ ಆಡಿದ ಕರ್ನಾಟಕದ ನಿನಾದ್‌ ರವಿ ಮತ್ತು ಗೋವಿಂದ ಸೆಹ್ವಾಗ್‌ ಅವರು ಟಾಪ್‌ಸ್ಪಿನ್‌ ಅಕಾಡೆಮಿ ಆಶ್ರಯದ ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಸೀರಿಸ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಶುಕ್ರವಾರ ನಡೆದ ಫೈನಲ್‌ನಲ್ಲಿ ನಿನಾದ್‌ ಮತ್ತು ಗೋವಿಂದ್‌ 6–2, 6–4 ನೇರ ಸೆಟ್‌ಗಳಿಂದ ವರುಣ್‌ ಗೌಡ ಮತ್ತು ಪ್ರೇರಿತ್‌ ಅವರನ್ನು ಸೋಲಿಸಿದರು.

ನಿನಾದ್‌ ಮತ್ತು ಸೆಹ್ವಾಗ್ ಅವರು ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಗೆದ್ದರು. ಎರಡನೇ ಸೆಟ್‌ನಲ್ಲಿ ವರುಣ್‌ ಮತ್ತು ಪ್ರೇರಿತ್ ದಿಟ್ಟ ಆಟ ಆಡಿದರು. ಹೀಗಾಗಿ 4–4ರ ಸಮಬಲ ಕಂಡುಬಂತು. ಈ ಹಂತದಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿದ ನಿನಾದ್‌ ಮತ್ತು ಗೋವಿಂದ್‌ ಸತತ ಎರಡು ಗೇಮ್‌ ಜಯಿಸಿ ಸಂಭ್ರಮಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.