ADVERTISEMENT

ರ‍್ಯಾಂಕಿಂಗ್: ಅಗ್ರ 10ರಿಂದ ಹೊರಬಿದ್ದ ನವೊಮಿ ಒಸಾಕ

ಏಜೆನ್ಸೀಸ್
Published 4 ಅಕ್ಟೋಬರ್ 2021, 18:22 IST
Last Updated 4 ಅಕ್ಟೋಬರ್ 2021, 18:22 IST
ನವೊಮಿ ಒಸಾಕ –ಎಎಫ್‌ಪಿ ಚಿತ್ರ
ನವೊಮಿ ಒಸಾಕ –ಎಎಫ್‌ಪಿ ಚಿತ್ರ   

ಪ್ಯಾರಿಸ್: ಜಪಾನ್‌ನ ನವೊಮಿ ಒಸಾಕ ಅವರು ವಿಶ್ವ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರಿಂದ ಹೊರಬಿದ್ದಿದ್ದಾರೆ. ಮೂರು ವರ್ಷಗಳ ಹಿಂದೆ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆದ ನಂತರ ಇದೇ ಮೊದಲ ಬಾರಿ ಈ ಕುಸಿತ ಕಂಡಿದ್ದಾರೆ.

ನಾಲ್ಕು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಒಸಾಕ ಸೋಮವಾರ ಬಿಡುಗಡೆಗೊಂಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.

ಈ ಹಿಂದೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನಕ್ಕೇರಿದ್ದ ಅವರು ಕಳೆದ ತಿಂಗಳಲ್ಲಿ ನಡೆದ ಅಮೆರಿಕ ಓಪನ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದರು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೂರ್ನಿಯಲ್ಲಿ ಅವರು ಆಡಿರಲಿಲ್ಲ. ಸದ್ಯದಲ್ಲೇ ಅಂಗಣಕ್ಕೆ ಮರಳುವುದಾಗಿ 23 ವರ್ಷದ ಒಸಾಕ ಕಳೆದ ವಾರ ಹೇಳಿದ್ದಾರೆ.

ADVERTISEMENT

ಎರಡು ಬಾರಿಯ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತೆ ಗಾರ್ಬೈನ್ ಮುಗುರುಜಾ ಅವರು ರ‍್ಯಾಂಕಿಂಗ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ಚಿಕಾಗೊದಲ್ಲಿ ಕಳೆದ ವಾರ ನಡೆದಿದ್ದ ಟೂರ್ನಿಯಲ್ಲಿ ಅವರು ಪ್ರಶಸ್ತಿ ಗೆದ್ದುಕೊಂಡಿದ್ದರು. ಫೈನಲ್‌ನಲ್ಲಿ ಮುಗುರುಜಾ ಎದುರು ಸೋತಿದ್ದ ಟುನೀಷಿಯಾದ ಓನ್ಸ್ ಜಬೇವುರ್ ಜೀವನಶ್ರೇಷ್ಠ 14ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.

ರ‍್ಯಾಂಕಿಂಗ್: ಅಗ್ರ 10 ಆಟಗಾರ್ತಿಯರು

ರ‍್ಯಾಂಕ್‌;ಆಟಗಾರ್ತಿ;ದೇಶ;ಪಾಯಿಂಟ್ಸ್‌

1;ಆ್ಯಶ್ಲಿ ಬಾರ್ಟಿ;ಆಸ್ಟ್ರೇಲಿಯಾ;9,077

2;ಅರಿನಾ ಸಬಲೆಂಕಾ;ಬೆಲಾರಸ್‌;7,115

3;ಕರೊಲಿನಾ ಪ್ಲಿಸ್ಕೋವ;ಜೆಕ್‌ ಗಣರಾಜ್ಯ;5,285

4;ಇಗಾ ಸ್ವಾಟೆಕ್;ಪೋಲೆಂಡ್;4,756

5;ಬಾರ್ಬೊರಾ ಕ್ರೆಸಿಕೋವ;ಜೆಕ್‌ ಗಣರಾಜ್ಯ;4,668

6;ಗಾರ್ಬೈನ್ ಮುಗುರುಜಾ;ಸ್ಪೇನ್‌;4,595

7;ಎಲಿನಾ ಸ್ವಿಟೋಲಿನಾ;ಉಕ್ರೇನ್‌;4,376

8;ಸೋಫಿಯಾ ಕೆನಿನ್‌;ಅಮೆರಿಕ;4,190

9;ಮರಿಯಾ ಸಕ್ಕರಿ;ಬ್ರಿಟನ್‌;4,055

10;ಬೆಲಿಂಡಾ ಬೆನ್ಸಿಕ್‌;ಸ್ವಿಟ್ಜರ್ಲೆಂಡ್‌;3,835

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.