ADVERTISEMENT

ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಇಂದು ನಡಾಲ್‌– ರೂಡ್‌ ಹಣಾಹಣಿ

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ ಇಂದು

ಏಜೆನ್ಸೀಸ್
Published 4 ಜೂನ್ 2022, 19:31 IST
Last Updated 4 ಜೂನ್ 2022, 19:31 IST
ಕಾಸ್ಪರ್‌ ರೂಡ್‌– ರಫೆಲ್ ನಡಾಲ್
ಕಾಸ್ಪರ್‌ ರೂಡ್‌– ರಫೆಲ್ ನಡಾಲ್   

ಪ್ಯಾರಿಸ್‌: ವೃತ್ತಿಜೀವನದ 22ನೇ ಗ್ರ್ಯಾ‌ನ್‌ ಸ್ಲಾಂ ಕಿರೀಟದ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಫೆಲ್‌ ನಡಾಲ್‌ ಒಂದೆಡೆಯಾದರೆ, ಮೊದಲ ಗ್ರ್ಯಾನ್‌ ಸ್ಲಾಂ ಫೈನಲ್‌ನಲ್ಲಿ ಆಡಲಿರುವ ನಾರ್ವೆಯ ಕಾಸ್ಪರ್‌ ರೂಡ್‌ ಮತ್ತೊಂದೆಡೆ.

ರೋಲಂಡ್‌ ಗ್ಯಾರೋಸ್‌ನ ಆವೆ ಮಣ್ಣಿನ ಅಂಕಣದಲ್ಲಿ ಭಾನುವಾರ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಈ ಇಬ್ಬರು ಆಟಗಾರರು ಎದುರಾಗಲಿದ್ದು, ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಲಾಗಿದೆ.

ರೂಡ್‌ ಅವರು ಕೆಲವು ಕಾಲ ನಡಾಲ್‌ ಟೆನಿಸ್‌ ಅಕಾಡೆಮಿಯಲ್ಲೂ ತರಬೇತಿ ಪಡೆದಿದ್ದರು. ಇದೀಗ ತಮ್ಮ ‘ರೋಲ್‌ ಮಾಡೆಲ್‌’ ವಿರುದ್ಧ ಫೈನಲ್‌ನಲ್ಲಿ ಆಡಲಿದ್ದಾರೆ. ಗ್ರ್ಯಾನ್‌ ಸ್ಲಾಂ ಟೂರ್ನಿಯಲ್ಲಿ ನಾಲ್ಕನೇ ಸುತ್ತಿನವರೆಗೆ ತಲುಪಿದ್ದು, ಅವರ ಇದುವರೆಗಿನ ಉತ್ತಮ ಸಾಧನೆ ಎನಿಸಿತ್ತು. ಮೊದಲ ಬಾರಿ ಪ್ರಶಸ್ತಿ ಸುತ್ತು ತಲುಪಿದ್ದಾರೆ.

ADVERTISEMENT

ಭಾನುವಾರ ನಡಾಲ್‌ ಗೆದ್ದರೆ, ಫ್ರೆಂಚ್‌ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದು, ಆಂಡ್ರೆಸ್‌ ಗಿಮೆನೊ ಹೆಸರಲ್ಲಿರುವ ದಾಖಲೆ ಮುರಿಯಲಿದ್ದಾರೆ. ಸ್ಪೇನ್‌ನವರೇ ಆದ ಗಿಮೆನೊ 1972 ರಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದರು.

ಸಿಲಿಚ್‌ಗೆ ಆಘಾತ: ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ರೂಡ್‌, ಕ್ರೊವೇಷ್ಯದ ಮರಿನ್‌ ಸಿಲಿಚ್‌ಗೆ ಆಘಾತ ನೀಡಿದ್ದರು. 14 ಏಸ್‌ಗಳು ಮತ್ತು 41 ವಿನ್ನರ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ 3-6, 6-4, 6-2, 6-2 ರಲ್ಲಿ ಜಯ ಸಾಧಿಸಿದ್ದರು.

ಪಂದ್ಯಕ್ಕೆ ಅಡ್ಡಿಪಡಿಸಿದ ಹೋರಾ ಟಗಾರ್ತಿ: ರೂಡ್‌ ಮತ್ತು ಸಿಲಿಚ್‌ ನಡುವಿನ ಸೆಮಿ ಪಂದ್ಯದ ವೇಳೆ ಪರಿಸರ ಹೋರಾಟಗಾರ್ತಿಯೊಬ್ಬಳು ಏಕಾಏಕಿ ಅಂಕಣಕ್ಕೆ ನುಗ್ಗಿದ್ದರಿಂದ 15 ನಿಮಿಷ ಆಟಕ್ಕೆ ಅಡ್ಡಿ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.