
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕರ್ನಾಟಕದ ರಣವೀರ್ ಗವಳಿ ಇಲ್ಲಿನ ಮ್ಯಾಟ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ 14 ವರ್ಷದೊಳಗಿನವರ ಚಾಂಪಿಯನ್‌ಷಿಪ್ ಸರಣಿಯ ಟೆನಿಸ್ ಟೂರ್ನಿಯಲ್ಲಿ ಡಬಲ್ ಪ್ರಶಸ್ತಿ ಗೆದ್ದುಕೊಂಡರು.
ಬಾಲಕರ ಸಿಂಗಲ್ಸ್‌ನ ಫೈನಲ್‌ನಲ್ಲಿ ರಣವೀರ್ 7-6 (4), 6-2ರಿಂದ ಏಗನ್ ಬಾಲಕುಮಾರ್ ವಿರುದ್ಧ ಗೆಲುವು ಸಾಧಿಸಿದರು. ರಣವೀರ್ ಮತ್ತು ಧನುಷ್ ಎಂ. ಜೋಡಿಯು ಡಬಲ್ಸ್‌ನಲ್ಲಿ 6-2, 6-0ರಿಂದ ದರ್ಶ್ ಮಲ್ಹಾನ್ ಮತ್ತು ಪಾರ್ಥ್ ತ್ಯಾಗಿ ಅವರನ್ನು ಮಣಿಸಿ ಚಾಂಪಿಯನ್ ಆಯಿತು.
ಬಾಲಕಿಯರ ಸಿಂಗಲ್ಸ್‌ನಲ್ಲಿ ಮೆಹರ್ ಟಿ. 6-3, 6-3ರಿಂದ ಪ್ರಿಯಾಲ್ ಸರಾಫ್ ಅವರನ್ನು ಸೋಲಿಸಿ ಕಿರೀಟ ಗೆದ್ದರು. ಡಬಲ್ಸ್ ಫೈನಲ್‌ನಲ್ಲಿ ಕನಿಶಾ ಸುಭಾಷ್ ಮತ್ತು ಪ್ರಣೀಕಾ ನಾಯ್ಕ್ ಎಂ. 6-2, 4-6, 10-7ರಿಂದ ಸಾಯಿ ಹಾಸಿನಿ ಪರ್ವತನೇನಿ ಮತ್ತು ದಿಯಾ ಬೆಹೆರಾ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.