ADVERTISEMENT

ಟೆನಿಸ್‌: ಸಾನಿಯಾ, ಬೋಪಣ್ಣ ಜೋಡಿಗಳಿಗೆ ಮುನ್ನಡೆ

ಪಿಟಿಐ
Published 4 ಜನವರಿ 2022, 12:40 IST
Last Updated 4 ಜನವರಿ 2022, 12:40 IST
ಸಾನಿಯಾ ಮಿರ್ಜಾ– ಎಎಫ್‌ಪಿ ಚಿತ್ರ
ಸಾನಿಯಾ ಮಿರ್ಜಾ– ಎಎಫ್‌ಪಿ ಚಿತ್ರ   

ಅಡಿಲೇಡ್‌: ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪ‍ಣ್ಣ ಅವರು ಇಲ್ಲಿ ನಡೆಯುತ್ತಿರುವಡಬ್ಲ್ಯುಟಿಎ ಮತ್ತುಎಟಿಪಿ ಟೂರ್ನಿಗಳಲ್ಲಿ ಮುನ್ನಡೆದಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಅವರು ಉಕ್ರೇನ್‌ನ ನಾದಿಯಾ ಕಿಚೆನೊಕ್‌ ಜೊತೆಗೂಡಿ 16ರ ಘಟ್ಟದ ಪಂದ್ಯದಲ್ಲಿ1-6, 6-3, 10-8ರಿಂದ ಕೆನಡಾದ ಗೇಬ್ರಿಯೇಲಾ ದಾಬ್ರೊವಸ್ಕಿ ಮತ್ತು ಮೆಕ್ಸಿಕೊದ ಗಿಲಿಯಾನ ಒಲ್ಮೊಸ್ ಅವರನ್ನು ಸೋಲಿಸಿದರು.

ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ ಪುಟಿದೆದ್ದು ಎರಡನೇ ಶ್ರೇಯಾಂಕದ ಜೋಡಿಯನ್ನು ಮಣಿಸುವಲ್ಲಿ ಸಾನಿಯಾ–ನಾದಿಯಾ ಯಶಸ್ವಿಯಾದರು.

ADVERTISEMENT

ಭಾರತದವರೇ ಆದ ರಾಮಕುಮಾರ್ ರಾಮನಾಥನ್ ಜೊತೆಗೂಡಿ ಕಣಕ್ಕಿಳಿದಿರುವ ಕನ್ನಡಿಗ ಬೋಪಣ್ಣ, ಮೊದಲ ಸುತ್ತಿನಲ್ಲಿ ಸುಲಭ ಜಯ ಸಂಪಾದಿಸಿದರು. ಈ ಜೋಡಿಯು6-2, 6-1ರಿಂದ ಅಮೆರಿಕದ ಜೆಮಿ ಕೆರೆಟನಿ ಮತ್ತು ಬ್ರೆಜಿಲ್‌ನ ಫರ್ನಾಂಡೊ ರೊಂಬೊಲಿ ಅವರಿಗೆ ಸೋಲುಣಿಸಿದರು.

ಎಟಿಪಿ ಟೂರ್‌ನಲ್ಲಿ ಬೋಪಣ್ಣ–ರಾಮಕುಮಾರ್ ಮೊದಲ ಬಾರಿ ಜೊತೆಯಾಗಿ ಕಣಕ್ಕಿಳಿದಿದ್ದರು.

ಡೆನ್ಮಾರ್ಕ್‌ನ ಅಗ್ರ ರ‍್ಯಾಂಕಿನ ಆಟಗಾರ ಹೋಲ್ಜರ್ ರೂನ್ ವಿರುದ್ಧ ಸಿಂಗಲ್ಸ್ ವಿಭಾಗದ ಅರ್ಹತಾ ಪಂದ್ಯವಾಡಲು ಅವಕಾಶ ಪಡೆದಿದ್ದ ರಾಮನಾಥನ್‌4-6 6-7(7)ರಿಂದ ಸೋತರು. ಆದರೆ ಅವರು ತೋರಿದ ಹೋರಾಟ ಗಮನಸೆಳೆಯಿತು.

ಜನವರಿ 17ರಿಂದ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ಗೆ ಇವು ಅಭ್ಯಾಸ ಟೂರ್ನಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.