ಹೋಬರ್ಟ್ : ಭಾರತದ ಸಾನಿಯಾ ಮಿರ್ಜಾ ಹೋಬರ್ಟ್ ಅಂತ ರಾಷ್ಟ್ರೀಯ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಸೆಮಿ ಫೈನಲ್‌ನಲ್ಲಿ ಸಾನಿಯಾ ಹಾಗೂ ಉಕ್ರೇನ್‌ನ ನಾದಿಯಾ ಕಿಚೆನೊಕ್, ಸ್ಲೋವೆನಿಯಾ–ಜೆಕ್ ಗಣರಾಜ್ಯದ ಜೋಡಿ ತಮರಾ ಜಿಡಾನ್ಸೆಕ್–ಮರಿಯಾ ಬೌಜ್‌ಕೊವಾ ಅವರನ್ನು 7–6, 6–2 ಯಿಂದ ಮಣಿಸಿದರು. ಒಂದು ತಾಸು 24 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.
ಮೊದಲ ಸೆಟ್ ಭಾರೀ ಪೈಪೋಟಿ ಯಿಂದ ಕೂಡಿತ್ತು. 6–6 ಸಮಬಲ ಕಂಡ ಈ ಸೆಟ್ ಟೈಬ್ರೇಕ್‌ವರೆಗೆ ಸಾಗಿತು. ಇಲ್ಲಿ ಸೊಗಸಾದ ಆಟದ ಮೂಲಕ ಪಾಯಿಂಟ್ ಕಲೆಹಾಕಿ ಮುನ್ನಡೆ ಪಡೆಯುವಲ್ಲಿ ಸಾನಿಯಾ–ಕಿಚೆನೊಕ್ ಯಶಸ್ವಿಯಾದರು.
ಎರಡನೇ ಸೆಟ್‌ನ ಮೂರು ಗೇಮ್ ಗಳಲ್ಲಿ ಎದುರಾಳಿಗಳ ಸರ್ವ್ ಮುರಿದ ಸಾನಿಯಾ ಮತ್ತು ನಾದಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.