ADVERTISEMENT

ಫ್ರೆಂಚ್ ಓಪನ್‌: ಹಿಂದೆ ಸರಿದ ಶಪೊವಲೊವ್‌

ರಾಯಿಟರ್ಸ್
Published 24 ಮೇ 2021, 16:29 IST
Last Updated 24 ಮೇ 2021, 16:29 IST
ಡೆನಿಸ್‌ ಶಪೊವಲೊವ್‌–ಎಎಫ್‌ಪಿ ಚಿತ್ರ
ಡೆನಿಸ್‌ ಶಪೊವಲೊವ್‌–ಎಎಫ್‌ಪಿ ಚಿತ್ರ   

ಒಟ್ಟಾವ: ಕೆನಡಾದ ಡೆನಿಸ್ ಶಪೊವಲೊವ್ ಅವರು ಭುಜದ ಗಾಯದ ಕಾರಣ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಭಾನುವಾರ ಈ ವಿಷಯ ತಿಳಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ಶಪೊವಲೊವ್ಶನಿವಾರ ನಡೆದ ಜಿನೇವಾ ಓಪನ್ ಟೂರ್ನಿಯ ಫೈನಲ್‌ನಲ್ಲಿ 6–7, 4–6ರಿಂದ ನಾರ್ವೆಯ ಕಾಸ್ಪರ್ ರೂಡ್‌ ಎದುರು ಎಡವಿದ್ದರು.

‘ನನ್ನ ವೈದ್ಯಕೀಯ ತಂಡದೊಂದಿಗೆ ಸಮಾಲೋಚಿಸಿದ ಬಳಿಕ ಈ ಬಾರಿಯ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದೇನೆ‘ ಎಂದು ಶಪೊವಲೊವ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ದುರದೃಷ್ಟವಶಾತ್‌ ಭುಜದ ನೋವು ನನ್ನನ್ನು ಬಾಧಿಸುತ್ತಿದೆ. ವೈದ್ಯಕೀಯ ಪರೀಕ್ಷೆಗಳು ನಡೆದಿವೆ. ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ. 2022ರ ಆವೃತ್ತಿಯಲ್ಲಿ ಆಡಲಿದ್ದೇನೆ‘ ಎಂದಿದ್ದಾರೆ.

ಗಾಯದ ಕಾರಣದಿಂದಲೇ ಸಿಮೊನಾ ಹಲೆಪ್‌ ಮತ್ತು ಸ್ಟ್ಯಾನ್ ವಾವ್ರಿಂಕಾ ಕೂಡ ಫ್ರೆಂಚ್‌ ಓಪನ್‌ನಲ್ಲಿ ಆಡದಿರುವ ನಿರ್ಧಾರ ತಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.