ಟೆನಿಸ್
ನವದೆಹಲಿ: ಭಾರತದ ಅರ್ಜುನ್ ಕಾಡೆ ಮತ್ತು ವಿಜಯ ಸುಂದರ್ ಪ್ರಶಾಂತ್ ಜೋಡಿ ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಜರ್ಮನಿಯ ಜೋಡಿಯನ್ನು ಹೊರದೂಡಿ, ಸ್ವಿಜರ್ಲೆಂಡ್‌ನ ಸ್ಟಾದ್‌ನಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಟೂರ್ನಿಯ ಸೆಮಿಫೈನಲ್‌ಗೆ ಮುನ್ನಡೆದರು.
ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ 6–3, 7–6 (5) ರಿಂದ ಜಾಕೊಬ್ ಸ್ನೇಟರ್– ಮಾರ್ಕ್ ವಾಲ್ನರ್ ಜೋಡಿಯನ್ನು ಸೋಲಿಸಿತು. ಈ ಎಟಿಪಿ 250 ಮಟ್ಟದ ಟೂರ್ನಿ ಒಟ್ಟು ₹6 ಕೋಟಿ ಬಹುಮಾನ ಹೊಂದಿದೆ.
ಅರ್ಜುನ್ ಈ ಹಿಂದೆ ಒಂದು ಎಟಿಪಿ ಪ್ರಶಸ್ತಿ ಗೆದ್ದಿದ್ದಾರೆ. ರಿತ್ವಿಕ್ ಬೊಲ್ಲಿಪಳ್ಳೀ ಜೊತೆಗೂಡಿ ಅಲ್ಮಾಟಿ ಎಟಿಪಿ 250 ಟೂರ್ನಿಯಲ್ಲಿ ವಿಜೇತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.