ADVERTISEMENT

ಟೆನಿಸ್: ದಾವಣಗೆರೆ ಮೇಲುಗೈ

55 ವರ್ಷ ದಾಟಿದವರ ವಿಭಾಗದಲ್ಲಿ ಮೈಸೂರು ಮಿಂಚು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 20:06 IST
Last Updated 15 ಡಿಸೆಂಬರ್ 2019, 20:06 IST
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಟೆನಿಸ್ ಟೂರ್ನಿಯ ಮುಕ್ತ ಡಬಲ್ಸ್‌ ವಿಭಾಗದಲ್ಲಿ ಜಯ ಸಾಧಿಸಿದ ದಾವಣಗೆರೆಯ ಅನಂದ್ ಮತ್ತು ಮಹಾಂತೇಶ್ ಜೋಡಿ –ಪ್ರಜಾವಾಣಿ ಚಿತ್ರ / ಸತೀಶ ಬಡಿಗೇರ್
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಟೆನಿಸ್ ಟೂರ್ನಿಯ ಮುಕ್ತ ಡಬಲ್ಸ್‌ ವಿಭಾಗದಲ್ಲಿ ಜಯ ಸಾಧಿಸಿದ ದಾವಣಗೆರೆಯ ಅನಂದ್ ಮತ್ತು ಮಹಾಂತೇಶ್ ಜೋಡಿ –ಪ್ರಜಾವಾಣಿ ಚಿತ್ರ / ಸತೀಶ ಬಡಿಗೇರ್   

ದಾವಣಗೆರೆ: ರಾಜ್ಯಮಟ್ಟದ ಆಹ್ವಾನಿತ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ದಾವಣಗೆರೆಯ ಅಲೋಕ್ ಆರಾಧ್ಯ ಹಾಗೂ ಡಬಲ್ಸ್‌ನಲ್ಲಿ ಮಹಾಂತೇಶ ಹಾಗೂ ಆನಂದ್‌ ಕೆ. ಪಾರಮ್ಯ ಮೆರೆದರು.

ದಾವಣಗೆರೆ ಜಿಲ್ಲಾ ಟೆನಿಸ್ ಸಂಸ್ಥೆ ವತಿಯಿಂದ ಭಾನುವಾರ ಮುಕ್ತಾಯಗೊಂಡ ರಾಜ್ಯಮಟ್ಟದ ಆಹ್ವಾನಿತ ಟೆನಿಸ್‌ ಟೂರ್ನಿಯಲ್ಲಿ 55 ವರ್ಷ ದಾಟಿದವರ ಸಿಂಗಲ್ಸ್‌ ಹಾಗೂ ಡಬಲ್ಸ್, 45 ವರ್ಷ ದಾಟಿದವರ ಸಿಂಗಲ್ಸ್‌ನಲ್ಲಿ ಮೈಸೂರಿನವರು ಮೇಲುಗೈ ಸಾಧಿಸಿದ್ದಾರೆ.

ಅಲೋಕ್ ಆರಾಧ್ಯ ಅವರು ದಾವಣಗೆರೆಯವರೇ ಆದ ಬಸವರಾಜ್ ಕೆ. ಅವರನ್ನು 7–5ರಲ್ಲಿ ಮಣಿಸಿದರೆ, ಮಹಾಂತೇಶ್ ಹಾಗೂ ಆನಂದ್ ಅವರ ಜೋಡಿ ಬೆಂಗಳೂರಿನ ಪ್ರಶಾಂತ್ ಹಾಗೂ ಸುರೇಶ್‌ ರೆಡ್ಡಿ ಅವರನ್ನು ಸೋಲಿಸಿದರು.

ADVERTISEMENT

ಫಲಿತಾಂಶ: 35 ವರ್ಷ ದಾಟಿದವರ ಸಿಂಗಲ್ಸ್‌: ದಾವಣಗೆರೆಯ ವಿಶಾಲ್ ಸಿರ್ವಿ ಅವರು ರುದ್ರೇಶ್ ವಿರುದ್ಧ (7–3), ಡಬಲ್ಸ್‌: ಯಾದಗಿರಿ ಜಗದೀಶ್–ಮಲ್ಲು ಯಾದವ್ ಜೋಡಿ ದಾವಣಗೆರೆಯ ವಿಶಾಲ್ ಸಿರ್ವಿ–ಹರ್ಷ ಎದುರು (7–5) ವಿಜಯ.

45 ವರ್ಷ ದಾಟಿದವರ ಸಿಂಗಲ್ಸ್‌: ಮೈಸೂರಿನ ರಾಮ್ ಬೆಳ್ಳಿಯಪ್ಪ ಅವರು ಬಾಗಲಕೋಟೆಯ ಉಜ್ವಲ್ ಸಕ್ರಿ ವಿರುದ್ಧ, ಡಬಲ್ಸ್‌: ಸಿಂಧನೂರಿನ ಸಿ.ಟಿ.ಪಾಟೀಲ್–ಮನೀಶ್ ಜೋಡಿ ಮೈಸೂರಿನ ರಾಮ್ ಬೆಳ್ಳಿಯಪ್ಪ ಹಾಗೂ ಭವರ್‌ಲಾಲ್‌ ಅವರ ವಿರುದ್ಧ ಜಯ ಸಾಧಿಸಿದರು.

55 ವರ್ಷ ದಾಟಿದವರ ಸಿಂಗಲ್ಸ್‌: ಮೈಸೂರಿನ ರಮೇಶ್ ಆರ್‌.ಎನ್. ಅವರು ಗೋಕಾಕ್‌ನ ಉದಯ್ ಅಜಾರೆ ಅವರ ವಿರುದ್ಧ, ಡಬಲ್ಸ್‌: ಮೈಸೂರಿನ ರಮೇಶ್ ಆರ್‌.ಎನ್‌ ಹಾಗೂ ಬಾಲಸುಬ್ರಹ್ಮಣ್ಯ ಅವರ ಜೋಡಿ ಮೈಸೂರಿನ ವೆಂಕಟೇಶ್ ಬಾಬು ಹಾಗೂ ಶ್ರೀನಿವಾಸ್ ಮೂರ್ತಿ ವಿರುದ್ಧ.

65 ವರ್ಷ ದಾಟಿದವರ ಡಬಲ್ಸ್‌: ಮೈಸೂರಿನ ತುಳಸೀರಾಮ್ ಹಾಗೂ ಬಳ್ಳಾರಿಯ ಜೋಸೆಫ್‌ ಅವರ ಜೋಡಿ ಗದಗ್‌ನ ಗಂಗಾಧರ ಥಡಿ ಹಾಗೂ ಮೈಸೂರಿನ ಪ್ರೇಮ್ ಪ್ರಕಾಶ್ ಅವರ ವಿರುದ್ಧ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.