ADVERTISEMENT

ಟೆನಿಸ್‌: ಪ್ರಕಾಶ್‌, ಸನಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:01 IST
Last Updated 18 ಫೆಬ್ರುವರಿ 2019, 20:01 IST

ಬೆಂಗಳೂರು: ಎನ್‌.ಪಿ.ಎಸ್‌.ಶಾಲೆಯ ಪ್ರಕಾಶ್‌ ಶರಣ್‌ ಮತ್ತು ಎಸ್‌.ಸನಾ ಅವರು ಎಸ್‌.ಎ.ಟಿ ಆಶ್ರಯದ ಎಐಟಿಎ 10 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್‌ ಆಗಿದ್ದಾರೆ.

ಎಸ್‌.ಎ.ಟಿ. ಅಂಗಳದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಪ್ರಕಾಶ್‌ 4–0, 1–4, 4–3ರಲ್ಲಿ ಲಿಖಿತ್‌ ಗೌಡ ಅವರನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಗೆದ್ದ ಪ್ರಕಾಶ್‌, ಎರಡನೇ ಸೆಟ್‌ನಲ್ಲಿ ನಿರಾಸೆ ಕಂಡರು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಅವರು 0–3ರಿಂದ ಹಿಂದಿದ್ದರು. ಹೀಗಿದ್ದರೂ ಎದೆಗುಂದದ ಪ‍್ರಕಾಶ್‌ ಕೆಚ್ಚೆದೆಯಿಂದ ಹೋರಾಡಿ ಗೆಲುವಿನ ಸಿಹಿ ಸವಿದರು. ಒಟ್ಟು ಮೂರು ಮ್ಯಾಚ್‌ ಪಾಯಿಂಟ್ಸ್‌ಗಳನ್ನು ಉಳಿಸಿಕೊಂಡ ಅವರು ‘ಟೈ ಬ್ರೇಕರ್’ನಲ್ಲಿ ಮೋಡಿ ಮಾಡಿದರು.

ADVERTISEMENT

ಇದಕ್ಕೂ ಮೊದಲು ನಡೆದಿದ್ದ 15 ಗೇಮ್‌ಗಳ ಸೆಮಿಫೈನಲ್‌ನಲ್ಲಿ ಪ್ರಕಾಶ್‌ 8–3ರಲ್ಲಿ ಅಯಾನ್‌ ಶಂಕರ್‌ ಅವರನ್ನು ಪರಾಭವಗೊಳಿಸಿದ್ದರು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸನಾ 4–2, 4–0 ನೇರ ಸೆಟ್‌ಗಳಿಂದ ಎಚ್‌.ಅದಿತಿ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.