ADVERTISEMENT

ಟೆನಿಸ್‌ ಪ್ರೀಮಿಯರ್‌ ಲೀಗ್‌: ಬೋಪಣ್ಣ, ಮುಟೆ ಕಣಕ್ಕೆ

ಪಿಟಿಐ
Published 7 ಅಕ್ಟೋಬರ್ 2025, 0:39 IST
Last Updated 7 ಅಕ್ಟೋಬರ್ 2025, 0:39 IST
<div class="paragraphs"><p>ರೋಹನ್ ಬೋಪಣ್ಣ</p></div>

ರೋಹನ್ ಬೋಪಣ್ಣ

   

(ಪಿಟಿಐ ಸಂಗ್ರಹ ಚಿತ್ರ)

ನವದೆಹಲಿ: ಹಿರಿಯ ಆಟಗಾರ ರೋಹನ್ ಬೋಪಣ್ಣ, 29ನೇ ಕ್ರಮಾಂಕದ ಲೂಸಿಯಾನೊ ದರ್ದೇರಿ ಸೇರಿದಂತೆ ಸಿಂಗಲ್ಸ್‌ನಲ್ಲಿ ವಿಶ್ವದ ಅಗ್ರ 50ರೊಳಗಿನ ಕನಿಷ್ಠ ಮೂವರು ಆಟಗಾರರು, ಟೆನಿಸ್‌ ಪ್ರೀಮಿಯರ್‌ ಲೀಗ್‌ನ (ಟಿಪಿಎಲ್‌) ಏಳನೇ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ. ಟಿಪಿಎಲ್‌ ಡಿಸೆಂಬರ್‌ 9 ರಂದು ಅಹ ಮದಾಬಾದಿನಲ್ಲಿ ಆರಂಭವಾಗಲಿದೆ.

ADVERTISEMENT

ವಿಶ್ವ ಕ್ರಮಾಂಕದಲ್ಲಿ 38ನೇ ಸ್ಥಾನದಲ್ಲಿರುವ ಫ್ರಾನ್ಸ್‌ನ ಆಟಗಾರ ಕೊರೆಂಟನ್ ಮುಟೆ, 39ನೇ ಕ್ರಮಾಂಕದ ಅಲೆಕ್ಸಾಂಡರ್ ಮುಲರ್‌ ಅವರು ಭಾರತದ ಅಗ್ರ ಆಟಗಾರರೊಂದಿಗೆ ಭಾಗವಹಿಸಲಿದ್ದಾರೆ. ಮುಂಬೈನಲ್ಲಿ ಇದೇ 9ರಂದು ಆಕ್ಷನ್‌ ನಡೆಯಲಿದೆ.

2024ರಲ್ಲಿ ಟಿಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಬೋಪಣ್ಣ ಅವರು ಎಸ್‌ಜಿ ಪೈಪರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ. ಇಟಲಿಯ ದರ್ದೇರಿ ಅವರು ರಾಜಸ್ಥಾನ ರೇಂಜರ್ಸ್‌ ತಂಡಕ್ಕೆ, ಮುಟೆ ಅವರು ಗುರುಗಾಂವ್ ಗ್ರ್ಯಾನ್‌ಸ್ಲಾಮರ್ಸ್ ತಂಡಕ್ಕೆ ಆಡಲಿದ್ದಾರೆ.

ಮುಲರ್ ಮತ್ತು ಆರ್ಥರ್‌ ರಿಂಡರ್‌ನೆಕ್‌ (ವಿಶ್ವ ಕ್ರಮಾಂಕದಲ್ಲಿ 54ನೇ ಸ್ಥಾನ) ಅವರು ಕ್ರಮವಾಗಿ ಗುಜರಾತ್ ಪ್ಯಾಂಥರ್ಸ್‌ ಮತ್ತು ಹೈದರಾಬಾದ್‌ ಸ್ಟ್ರೈಕರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.