ADVERTISEMENT

ಟೆನಿಸ್ ತಾರೆ ಸ್ಪೇನ್‌ನ ರಫೆಲ್ ನಡಾಲ್‌ಗೆ ಕೋವಿಡ್

ರಾಯಿಟರ್ಸ್
Published 20 ಡಿಸೆಂಬರ್ 2021, 12:18 IST
Last Updated 20 ಡಿಸೆಂಬರ್ 2021, 12:18 IST
ರಫೆಲ್ ನಡಾಲ್
ರಫೆಲ್ ನಡಾಲ್   

ನವದೆಹಲಿ: ಟೆನಿಸ್ ತಾರೆ ಸ್ಪೇನ್‌ನ ರಫೆಲ್ ನಡಾಲ್‌ಗೆ ಕೋವಿಡ್ ದೃಢಪಟ್ಟಿದೆ ಎಂದು ವರದಿಯಾಗಿದೆ. ಅಬುಧಾಬಿಯಲ್ಲಿ ನಡೆದ ಮುಬದಲ ವಿಶ್ವ ಟೆನಿಸ್ ಚಾಂಪಿಯನ್‌ಷಿಪ್‌ ಪ್ರದರ್ಶನ ಟೂರ್ನಿಯಲ್ಲಿಭಾಗವಹಿಸಿದ್ದ ನಡಾಲ್, ಗಾಯದ ಸಮಸ್ಯೆಯಿಂದಾಗಿ ತವರೂರು ಸ್ಪೇನ್‌ಗೆ ಮರಳಿದ್ದರು.

ಸ್ವತಃ ನಡಾಲ್ ಅವರೇ ಕೊರೊನಾ ಸೋಂಕು ತಗುಲಿರುವುದನ್ನು ಖಚಿತಪಡಿಸಿದ್ದಾರೆ. 'ಅಬುಧಾಬಿ ಟೂರ್ನಿಯಲ್ಲಿ ಪಾಲ್ಗೊಂಡ ಬಳಿಕ ತವರಿಗೆ ಬಂದಿರುವ ನನಗೆ ಕೋವಿಡ್ ದೃಢಪಟ್ಟಿದೆ. ಸ್ಪೇನ್‌ಗೆ ಮರಳಿದ ಬಳಿಕ ನಡೆಸಿದ ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ಕಾಣಿಸಿಕೊಂಡಿದೆ' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

35ರ ಹರೆಯದ ನಡಾಲ್, 20 ಬಾರಿ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಸತತ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಡಾಲ್ ಆಗಸ್ಟ್‌ನಲ್ಲಿ ವಾಷಿಂಗ್ಟನ್‌‌ನಲ್ಲಿ ನಡೆದ ಸಿಟಿ ಓಪನ್ ಟೂರ್ನಿಯ ಬಳಿಕ ಇದೇ ಮೊದಲ ಬಾರಿಗೆ ಟೆನಿಸ್ ಅಂಗಣಕ್ಕೆ ಇಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.