ADVERTISEMENT

ಫ್ರೆಂಚ್‌ ಓಪನ್ ಟೆನಿಸ್‌: ಒಂದು ಸಾವಿರ‌ ಪ್ರೇಕ್ಷಕರಿಗೆ ಅವಕಾಶ

ಕೋವಿಡ್‌–19 ಪರಿಣಾಮ

ಏಜೆನ್ಸೀಸ್
Published 25 ಸೆಪ್ಟೆಂಬರ್ 2020, 13:46 IST
Last Updated 25 ಸೆಪ್ಟೆಂಬರ್ 2020, 13:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಗೆ ಪ‍್ರೇಕ್ಷಕರ ಸಂಖ್ಯೆಯನ್ನು ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಡಿತಗೊಳಿಸಲಾಗಿದೆ. ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಗಳುಭಾನುವಾರ ಆರಂಭವಾಗಲಿದ್ದು, ದಿನವೊಂದಕ್ಕೆ 1,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಫ್ರಾನ್ಸ್‌ ಪ್ರಧಾನ ಮಂತ್ರಿ ಜೀನ್‌ ಕಾರ್ಟೆಕ್ಸ್‌ ಅವರು ಟೂರ್ನಿಗೆ ಪ್ರೇಕಕ್ಷರ ಸಂಖ್ಯೆಯನ್ನು 5000ದಿಂದ 1000ಕ್ಕೆ ಕಡಿತಗೊಳಿಸಲಾಗುವುದು ಎಂದು ಗುರುವಾರ ಹೇಳಿದ್ದರು. ಆದರೆ ಈ ಸಂಖ್ಯೆಯು ಪ್ರೇಕ್ಷಕರಿಗೆ ಮಾತ್ರ ಸೀಮಿತವಾಗಿದ್ದು, ಆಟಗಾರರು, ಕೋಚ್‌ಗಳು, ಸಂಘಟಕರು ಹಾಗೂ ರೋಲ್ಯಾಂಡ್‌ ಗ್ಯಾರೋಸ್‌ನ ಇತರ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಧಾನಿ ಕಚೇರಿಯು ಶುಕ್ರವಾರ ಸ್ಪಷ್ಟಪಡಿಸಿದೆ.

‘ಇದೊಂದು ದೊಡ್ಡ ಹೊಡೆತ. ಪ್ರೇಕ್ಷಕರಿಗೆ ಟಿಕೆಟ್‌ ಹಣವನ್ನು ಮರಳಿಸಲಾಗುವುದು‘ ಎಂದು ಫ್ರೆಂಚ್‌ ಓಪನ್‌ ಟೂರ್ನಿಯ ನಿರ್ದೇಶಕ ಗಾಯ್‌ ಫ್ರಾಂಕಿನ್ಫೊ ಹೇಳಿದ್ದಾರೆ.

ADVERTISEMENT

ಪ್ಯಾರಿಸ್‌ನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದರಿಂದ, ಟೂರ್ನಿಯ ಪ್ರೇಕ್ಷಕರ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಬರಲಾಗುತ್ತಿದೆ. ಮೊದಲು 11,500 ಮಂದಿಗೆ ಅವಕಾಶ ಎಂದು ಹೇಳಲಾಗಿತ್ತು. ಬಳಿಕ 5,000ಕ್ಕೆ ಇಳಿಸಲಾಯಿತು. ಈಗ 1000ಕ್ಕೆ ಕಡಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.