ADVERTISEMENT

ಗಾಲಿ ಕುರ್ಚಿ ಟೆನಿಸ್‌ ಟೂರ್ನಿ: ಮೂರನೇ ಸುತ್ತಿಗೆ ಪ್ರತಿಮಾ

ಶೇಖರ್‌ ವೀರಸ್ವಾಮಿಗೆ ಜಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 17:42 IST
Last Updated 6 ಡಿಸೆಂಬರ್ 2018, 17:42 IST
ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕರ್ನಾಟಕದ ಪ್ರತಿಮಾ ಎನ್. ರಾವ್ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕರ್ನಾಟಕದ ಪ್ರತಿಮಾ ಎನ್. ರಾವ್ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕದ ಪ್ರತಿಮಾ ಎನ್‌.ರಾವ್‌ ಅವರು ತಬೆಬುಯಿ ಓಪನ್‌ ಅಖಿಲ ಭಾರತ ಗಾಲಿ ಕುರ್ಚಿ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಕಬ್ಬನ್‌ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ ಎಲ್‌ಟಿಎ) ಅಂಗಳದಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಬೆಂಗಳೂರಿನ ಪ್ರತಿಮಾ 8–5ರಲ್ಲಿ ನಳಿನಿ ಕುಮಾರಿ ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಪ್ರತಿಮಾ, ಚುರುಕಿನ ಸರ್ವ್‌ ಮತ್ತು ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ADVERTISEMENT

ಮೊದಲ ಸುತ್ತಿನ ಪಂದ್ಯಗಳಲ್ಲಿ ಎ.ರುತು ರಾಜೇಶ್ವರಿ 8–5ರಲ್ಲಿ ಕೆ.ಶಿಲ್ಪಾ ಎದುರೂ, ಗೀತಾ ಚೌಹಾಣ್‌ 8–6ರಲ್ಲಿ ಸ್ಟೆಲ್ಲಾ ಮೇಲೂ, ಬಿಸ್ಮಿಲ್ಲಾ ಮುಲ್ಲಾ 8–4 ರಲ್ಲಿ ಎಸ್‌.ಎಚ್‌.ಮಂಜುಳಾ ವಿರುದ್ಧವೂ ಗೆದ್ದರು. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಶೇಖರ್‌ ವೀರಸ್ವಾಮಿ ವಿಜಯಿಯಾದರು. ಮೊದಲ ಸುತ್ತಿನ ಪೈಪೋಟಿಯಲ್ಲಿ ವೀರಸ್ವಾಮಿ 8–4ರಲ್ಲಿ ಅಲೆಕ್ಸಾಂಡರ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.