ಜಿನಿವಾ: ರೋಚಕ ಘಟ್ಟದಲ್ಲಿ ಎರಡು ‘ಮ್ಯಾಚ್ ಪಾಯಿಂಟ್’ ಉಳಿಸಿಕೊಂಡ ಅಲೆಕ್ಸಾಂಡರ್ ಜ್ವೆರೆವ್, ಜಿನಿವಾ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಜರ್ಮನಿಯರ ಜ್ವೆರೆವ್ 6–3, 3–6, 7–6ರಲ್ಲಿ ಚಿಲಿ ದೇಶದ ನಿಕೋಲಸ್ ಜೆರಿ ಅವರನ್ನು ಪರಾಭವಗೊಳಿಸಿದರು.
ಜ್ವೆರೆವ್ ಅವರು ಈ ಋತುವಿನಲ್ಲಿ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ.ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಹೊಂದಿದ್ದ ಜ್ವೆರೆವ್ ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಗೆದ್ದರು. ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಜೆರಿ 1–1ರಲ್ಲಿ ಸಮಬಲ ಸಾಧಿಸಿದರು.
ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ರೋಚಕ ಪೈಪೋಟಿ ಏರ್ಪಟ್ಟಿತ್ತು. ಉಭಯ ಆಟಗಾರರು ಸರ್ವ್ ಉಳಿಸಿಕೊಂಡಿದ್ದರಿಂದ 6–6 ಸಮಬಲ ಕಂಡುಬಂತು. ಈ ಹಂತದಲ್ಲಿ ಜೆರಿ, ಎರಡು ಚಾಂಪಿಯನ್‌ಷಿಪ್ ಪಾಯಿಂಟ್ ಕಳೆದುಕೊಂಡರು.
ಒತ್ತಡದ ಪರಿಸ್ಥಿತಿಯಲ್ಲೂ ಛಲದಿಂದ ಹೋರಾಡಿದ ಜ್ವೆರೆವ್, ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.