ADVERTISEMENT

2003 ವಿಶ್ವಕಪ್‌: ವಿಂಡೀಸ್‌ಗೆ 3 ರನ್‌ ರೋಚಕ ಗೆಲುವು, ಫೈನಲ್‌ ಖುಷಿಯಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:57 IST
Last Updated 15 ಮೇ 2019, 20:57 IST
ಆ್ಯಂಡ್ರ್ಯೂ ಸೈಮಂಡ್ಸ್‌
ಆ್ಯಂಡ್ರ್ಯೂ ಸೈಮಂಡ್ಸ್‌   

2003ರ ವಿಶ್ವಕಪ್‌ ಟೂರ್ನಿ ಅಚ್ಚರಿಯ ಫಲಿತಾಂಶಗಳನ್ನು ನೀಡಿತು. ಲೀಗ್‌ ಹಂತದಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಶ್ರೀಲಂಕಾ ತಂಡಗಳು ಒಂದಂಕಿಯ ರನ್‌ ಅಂತರದಿಂದ ಗೆಲುವು ಪಡೆದಿದ್ದವು. ವಿಶ್ವಕಪ್‌ನಲ್ಲಿ ಭಾರತ 1983ರ ಬಳಿಕ ಫೈನಲ್‌ ತಲುಪಿದ ಖುಷಿಯ ಅಲೆಯಲ್ಲಿತ್ತು.

* ‘ಬಿ’ ಗುಂಪಿನಲ್ಲಿದ್ದ ವೆಸ್ಟ್‌ ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಲೀಗ್‌ ಪಂದ್ಯ ರೋಚಕ ಘಟ್ಟದಲ್ಲಿ ಅಂತ್ಯ ಕಂಡು, ವಿಂಡೀಸ್‌ ಮೂರು ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್‌ 278 ರನ್‌ ಗಳಿಸಿತ್ತು. ದಕ್ಷಿಣ ಆಫ್ರಿಕಾ 275 ರನ್‌ ಗಳಿಸಿ ಸೋತಿತು.

*ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್‌ ತಂಡಗಳ ನಡುವಣ ಲೀಗ್ ಪಂದ್ಯದಲ್ಲಿ ಲಂಕಾ ಪಡೆ ಆರು ರನ್‌ಗಳ ರೋಚಕ ಜಯ ಸಾಧಿಸಿತ್ತು. ಈ ತಂಡ ನೀಡಿದ್ದ 229 ರನ್‌ ಗುರಿ ಮುಟ್ಟಲು ವಿಂಡೀಸ್‌ ಅವಕಾಶ ನೀಡಲಿಲ್ಲ. ಈ ತಂಡದ ಪಿ. ಗುಣರತ್ನೆ ಕೊನೆಯ ಓವರ್‌ನಲ್ಲಿ ಚುರುಕಿನ ಬೌಲಿಂಗ್ ಮಾಡಿದ್ದರು.

ADVERTISEMENT

* 2003ರ ಟೂರ್ನಿಯಲ್ಲಿ ಒಟ್ಟು ಹೆಚ್ಚು ರನ್ ಗಳಿಸಿ ವೈಯಕ್ತಿಕ ಪ್ರಶಸ್ತಿ ಪಡೆದಿದ್ದ ಸಚಿನ್‌ ತೆಂಡೂಲ್ಕರ್‌ ಶತಕದ ಸನಿಹ ಮೂರು ಬಾರಿ ಬಂದು ವಿಫಲರಾಗಿದ್ದರು. ಜಿಂಬಾಬ್ವೆ ವಿರುದ್ಧ 81, ಪಾಕಿಸ್ತಾನ ಎದುರು 98, ಕೀನ್ಯಾ ಎದುರು 83 ರನ್‌ ಗಳಿಸಿದ್ದಾಗ ಔಟಾಗಿದ್ದರು. ಈ ಟೂರ್ನಿಯಲ್ಲಿ ಸಚಿನ್‌ ಒಂದೇ ಶತಕ ದಾಖಲಿಸಿದ್ದರು. ಅದು ನಮೀಬಿಯಾ ತಂಡದ ಎದುರು.

*‘ಎ’ ಗುಂಪಿನಲ್ಲಿದ್ದ ಭಾರತ ಆಡಿದ ಐದು ಪಂದ್ಯಗಳಲ್ಲಿ ಗೆಲುವು ಪಡೆದು ಸೂಪರ್‌ ಸಿಕ್ಸ್‌ ಹಂತದಲ್ಲಿ ಕೀನ್ಯಾವನ್ನು ಮಣಿಸಿತ್ತು. ಸೆಮಿಫೈನಲ್‌ನಲ್ಲಿ ಇದೇ ತಂಡದ ಎದುರು ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ಟೆಸ್ಟ್‌ ಮಾನ್ಯತೆ ಪಡೆಯದ ಕೀನ್ಯಾ ಅನಿರೀಕ್ಷಿತ ಫಲಿತಾಂಶ ನೀಡಿ ಅಚ್ಚರಿ ಮೂಡಿಸಿತ್ತು.

*ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಎದುರು ಡಕ್ವರ್ಥ್‌ ಲೂಯಿಸ್‌ ನಿಯಮದ ಪ್ರಕಾರ 48 ರನ್ ಗೆಲುವು ಪಡೆದಿತ್ತು. ಆಸ್ಟ್ರೇಲಿಯಾದ ಆ್ಯಂಡ್ರೂ ಸೈಮೆಂಡ್ಸ್‌ ಗಳಿಸಿದ 91 ರನ್‌ಗಳ ಬಲದಿಂದ ತಂಡ 212 ರನ್ ಕಲೆಹಾಕಿತ್ತು. ಮಳೆ ಸುರಿದ ಕಾರಣ ಲಂಕಾಕ್ಕೆ 172 ರನ್‌ ಪರಿಷ್ಕೃತ ಗುರಿ ನೀಡಲಾಗಿತ್ತು. ಬ್ರೆಟ್‌ ಲೀ ಮೂರು ಮತ್ತು ಬ್ರಾಡ್‌ ಹಾಗ್ ಎರಡು ವಿಕೆಟ್‌ ಪಡೆದು ಆಸೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.