ADVERTISEMENT

ಸ್ಮಾರ್ಟ್‌ಫೋನ್‌ ಮಾರಾಟ ಮೂರು ಪಟ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ಭಾರತದಲ್ಲಿ ಸ್ಮಾರ್ಟ್‌­­ಫೋನ್‌ ಮಾರಾಟ 2013­ರಲ್ಲಿ ಮೂರು ಪಟ್ಟು ಹೆಚ್ಚಿದ್ದು, 440 ಲಕ್ಷಕ್ಕೆ ಏರಿಕೆ ಕಂಡಿದೆ ಎಂದು ಮಾರು­ಕಟ್ಟೆ ಅಧ್ಯಯನ ಸಂಸ್ಥೆ ‘ಐಡಿಸಿ’ ಹೇಳಿದೆ.

ಸ್ಥಳೀಯ ಹ್ಯಾಂಡ್‌ಸೆಟ್‌ ತಯಾರಿಕಾ ಕಂಪೆ­ನಿಗಳಾದ ಮೈಕ್ರೊಮ್ಯಾಕ್ಸ್‌ ಮತ್ತು ಕಾರ್ಬನ್‌ ಕಂಪೆನಿಗಳ ಅಗ್ಗದ ದರದ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಗರಿಷ್ಠ ಮಟ್ಟದಲ್ಲಿದೆ. ಆದರೂ, ಕೊರಿಯಾ ಮೂಲದ ಸ್ಯಾಮ್ಸಂಗ್‌ ಶೇ 38ರಷ್ಟು ಪಾಲಿನೊಂದಿಗೆ ಭಾರತದ ಸ್ಮಾರ್ಟ್‌-­ಫೋನ್‌ ಮಾರುಕಟ್ಟೆ ಯಲ್ಲಿ  ಮುಂಚೂ­ಣಿ­ಯಲ್ಲಿದೆ ಎಂದು ವರದಿ ವಿಶ್ಲೇಷಿಸಿದೆ.

2012ರಲ್ಲಿ ಒಟ್ಟು 162 ಲಕ್ಷ ಸ್ಮಾರ್ಟ್‌ಫೋನ್‌ ಮಾರಾಟ­ವಾಗಿದ್ದವು. 2013ನೇ ಸಾಲಿನ ನಾಲ್ಕ­ನೇ ತ್ರೈಮಾಸಿ ಕದ ಅಂಕಿ ಅಂಶದಂತೆ ಸ್ಮಾರ್ಟ್‌ಪೋನ್‌ ಮಾರು­ಕಟ್ಟೆಯಲ್ಲಿ ಮೈಕ್ರೊಮ್ಯಾಕ್ಸ್‌ ಶೇ 16ರಷ್ಟು, ಕಾರ್ಬನ್‌ ಶೇ 10ರಷ್ಟು, ಸೋನಿ ಶೇ 5ರಷ್ಟು ಮತ್ತು ಲಾವಾ ಶೇ 4.7ರಷ್ಟು ಪಾಲು ಹೊಂದಿವೆ.  ಸ್ಮಾರ್ಟ್‌­ಫೋನ್‌ಗಳಿಗಿಂತ ಸ್ವಲ್ಪ ದೊಡ್ಡ ದಿರುವ 5ರಿಂದ 6.99 ಇಂಚು ದೃಶ್ಯ ಪರದೆಯ ಫ್ಯಾಬ್ಲೆಟ್‌­ಗಳ ಮಾರುಕಟ್ಟೆ ಪಾಲು ನಾಲ್ಕನೇ ತ್ರೈಮಾಸಿದಲ್ಲಿ ಶೇ 20ಕ್ಕೆ ಏರಿಕೆ ಕಂಡಿದೆ.

ಫೀಚರ್‌ ಫೋನ್‌­-ಗಳಿಂದ ಸ್ಮಾರ್ಟ್‌­ಫೋನ್‌ನತ್ತ ವಲಸೆ ಬರುತ್ತಿರುವ ಗ್ರಾಹ ಕರ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ದ್ವಿಗುಣ­ಗೊಂಡಿದೆ. ದರ ಇಳಿಕೆಯೂ ಈ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ’ ಎಂದು ‘ಐಡಿಸಿ’ಯ ಭಾರತೀಯ ಮುಖ್ಯಸ್ಥರಾದ ಮಾನಸಿ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

2013ರಲ್ಲಿ ಒಟ್ಟಾರೆ  ಮೊಬೈಲ್‌ ಹ್ಯಾಂಡ್‌ಸೆಟ್‌ಗಳ ಮಾರಾಟ ಶೇ 18 ರಷ್ಟು ಹೆಚ್ಚಿದ್ದು 2,570 ಲಕ್ಷ ತಲುಪಿದೆ. 2012ರಲ್ಲಿ 2,180 ಲಕ್ಷದಷ್ಟಿತ್ತು. 

ಒಟ್ಟಾರೆ ದೇಶೀಯ ಮೊಬೈಲ್‌ ಮಾರುಕಟ್ಟೆ­ಯಲ್ಲಿ ಸ್ಯಾಮ್ಸಂಗ್‌ ಶೇ 19 ರಷ್ಟು, ಮೈಕ್ರೊಮ್ಯಾಕ್ಸ್‌ ಶೇ 13ರಷ್ಟು ಮತ್ತು ನೋಕಿಯಾ ಶೇ 12ರಷ್ಟು ಪಾಲು ಹೊಂದಿವೆ.

ಬ್ಲ್ಯಾಕ್‌ಬೆರಿ ಬೆಲೆ ಭಾರಿ ಇಳಿಕೆ
ಮಾರಾಟ ಗಣನೀ ಯವಾಗಿ ಕುಸಿತ ಕಂಡಿರುವುದ­ರಿಂದ ಬ್ಲ್ಯಾಕ್‌ಬೆರಿ ತನ್ನ ‘ಜೆಡ್‌ 10’ ಸರಣಿಯ ಸ್ಮಾರ್ಟ್‌­ಪೋನ್‌ಗಳ ಬೆಲೆಯನ್ನು ಮತ್ತೆ ತಗ್ಗಿಸಿದೆ.

ಈ ಫೋನ್‌ ಮಾರುಕಟ್ಟೆಗೆ ಬಿಡುಗಡೆ­ಯಾದಾಗ ಬೆಲೆ ₨43,490 ಇತ್ತು. ಸೆಪ್ಟೆಂಬರ್‌ನಲ್ಲಿ ₨29,990ಕ್ಕೆ ತಗ್ಗಿಸ­ಲಾ­ಗಿತ್ತು. ಮತ್ತೆ ಈಗ ₨17,990ಕ್ಕೆ ಇಳಿಸ ಲಾಗಿದೆ. ಈ ಕೊಡುಗೆ 60 ದಿನಗಳಿಗೆ ಸೀಮಿತ ಎಂದು ಕಂಪೆನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.