ADVERTISEMENT

ಹೊಸ ಸಾಧ್ಯತೆಗಳನ್ನು ತೆರೆದಿಟ್ಟ ಆ್ಯಪಲ್‌ ಐಪ್ಯಾಡ್‌ಗೆ 10 ವರ್ಷಗಳ ಸಂಭ್ರಮ 

ಏಜೆನ್ಸೀಸ್
Published 28 ಜನವರಿ 2020, 7:02 IST
Last Updated 28 ಜನವರಿ 2020, 7:02 IST
ಐಪ್ಯಾಡ್‌
ಐಪ್ಯಾಡ್‌    
""
""

ಬೆಂಗಳೂರು: ಹತ್ತು ವರ್ಷಗಳ ಹಿಂದೆ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಆ್ಯಪಲ್‌ ಸಹ–ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ಹೊಸ ಪ್ರಾಡಕ್ಟ್‌ ಪರಿಚಯಿಸಿದರು. ಆ್ಯಪಲ್‌ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸಾಧನವಾಯಿತು 'ಐಪ್ಯಾಡ್‌'.

ಐಪ್ಯಾಡ್‌ಗೆ ಈಗ 10 ವರ್ಷಗಳ ಸಂಭ್ರಮ. ಆ್ಯಪಲ್‌ನ ಮ್ಯಾಕ್‌ ಲ್ಯಾಪ್‌ಟಾಪ್‌ ಮತ್ತು ಐಫೋನ್‌ ಮೊಬೈಲ್ ಎರಡರ ಲಕ್ಷಣಗಳನ್ನೂ ಒಳಗೊಂಡಮೊಬೈಲ್‌ಗಿಂತ ದೊಡ್ಡ ಪರದೆಯ ಹಾಗೂ ಲ್ಯಾಪ್‌ಟಾಪ್‌ಗಿಂತ ತೆಳ್ಳಗಿನ 'ಐಪ್ಯಾಡ್‌' ಬಹುಬೇಗ ಜನರನ್ನು ಸೆಳೆಯಿತು.

ಆರಂಭದಲ್ಲಿ ಐಪ್ಯಾಡ್‌ಗೆ 499 ಡಾಲರ್‌ (ಆಗ ಸುಮಾರು ₹ 22,500) ನಿಗದಿ ಪಡಿಸಲಾಗಿತ್ತು. 2018ರ ವರೆಗೂ ಸುಮಾರು 40 ಕೋಟಿ ಐಪ್ಯಾಡ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಪ್ರಸ್ತುತ ಐಪ್ಯಾಡ್‌, ಐಪ್ಯಾಡ್‌ ಮಿನಿ, ಐಪ್ಯಾಡ್‌ ಪ್ರೊ ಹಾಗೂ ಐಪ್ಯಾಡ್‌ ಏರ್‌ ನಾಲ್ಕು ಮಾದರಿಗಳಲ್ಲಿಲಭ್ಯವಿದೆ. ಎ12ಎಕ್ಸ್‌ ಬಯೋನಿಕ್‌ ಚಿಪ್‌, ಆ್ಯಪಲ್‌ ಪೆನ್ಸಿಲ್ ಸಪೋರ್ಟ್‌, 1 ಟಿಬಿ ವರೆಗೂ ಸಂಗ್ರಹ ಸಾಮರ್ಥ್ಯ ಹಾಗೂ ಲಿಕ್ವಿಡ್‌ ರೆಟಿನಾ ಡಿಸ್‌ಪ್ಲೇ ಒಳಗೊಂಡ ಪ್ರೀಮಿಯಂ ಆವೃತ್ತಿಯೂ ಲಭ್ಯವಿದೆ.

ADVERTISEMENT

ಹೊಸ ಸಾಧ್ಯತೆಗಳತ್ತ ಉತ್ಸಕರಾಗಿದ್ದ ಸ್ಟೀವ್‌ ಜಾಬ್ಸ್‌ ನಿಧನಕ್ಕೂ ಮುನ್ನ ಬಿಡುಗಡೆ ಮಾಡಿದ ಕಂಪನಿಯ ಪ್ರಮುಖ ಪ್ರಾಡೆಕ್ಟ್‌ ಐಪ್ಯಾಡ್‌. 'ಅದ್ಭುತವಾದ ಮತ್ತು ಬದಲಾವಣೆಗಳನ್ನು ತರಬಲ್ಲ ಸಾಧನ' ಎಂದೇ ಸ್ಟೀವ್‌ ಬಣ್ಣಿಸಿದ್ದರು. ಅಂತರ್ಜಾಲದಲ್ಲಿ ಹುಡುಕಾಟ, ಇಮೇಲ್‌ ಕಳುಹಿಸುವುದು, ಇ–ಪುಸ್ತಕಗಳ ಓದು, ಫೋಟೊ ಮತ್ತು ವಿಡಿಯೊ ವೀಕ್ಷಣೆ, ಸಂಗೀತ ಆಲಿಸಲು, ಗೇಮ್‌ ಆಡಲು, ಸುದ್ದಿ ಪತ್ರಿಕೆ ಮತ್ತು ಮ್ಯಾಗಜೀನ್‌ ಓದು,...ಹೀಗೆ ಇದರ ಉಪಯೋಗದ ಪಟ್ಟಿ ದೊಡ್ಡದು.

ಮೊದಲುಬಿಡುಗಡೆಯಾದ ಐಪ್ಯಾಡ್‌ 9.7 ಇಂಚು ಡಿಸ್‌ಪ್ಲೇ ಹೊಂದಿತ್ತು. ಸಿಂಗಲ್‌ ಕೋರ್‌ ಆ್ಯಪಲ್‌ ಎ4 ಪ್ರೊಸೆಸರ್‌, 64 ಜಿಬಿ ಸಂಗ್ರಹ ಸಾಮರ್ಥ್ಯ, 256 ಎಂಬಿ ರ್‍ಯಾಮ್‌, 10 ಗಂಟೆ ಬ್ಯಾಟರಿ ಚಾರ್ಜ್‌, ವೈ–ಫೈ, ಬ್ಲೂಟೂಥ್‌, ಹೆಡ್‌ಫೋನ್‌ ಜ್ಯಾಕ್‌ ಒಳಗೊಂಡಿತ್ತು. 0.5 ಇಂಚು ದಪ್ಪ ಮತ್ತು 680 ಗ್ರಾಂ ತೂಕವಿತ್ತು.

2010ರ ಏಪ್ರಿಲ್‌ 3ರಂದು ಮಾರಾಟಕ್ಕೆ ಲಭ್ಯವಾದ ಐಪ್ಯಾಡ್‌, ಒಂದೇ ದಿನದಲ್ಲಿ 3 ಲಕ್ಷ ಮಾರಾಟಗೊಂಡವು. 2011ರ ಮಾರ್ಚ್‌ನಲ್ಲಿ ಐಪ್ಯಾಡ್‌ 2 ಬಿಡುಗಡೆ ವೇಳೆಗೆ 1.5 ಕೊಟಿ ಐಪ್ಯಾಡ್‌ಗಳು ಮಾರಾಟಗೊಂಡಿದ್ದವು. 2019ರ ಸೆಪ್ಟೆಂಬರ್‌ನಲ್ಲಿ 10.2 ಇಂಚು ರೆಟಿನಾ ಡಿಸ್‌ಪ್ಲೇ ಮತ್ತು ಸ್ಮಾರ್ಟ್‌ ಕೀಬೋರ್ಡ್‌ ಸಪೋರ್ಟ್ ಹೊಂದಿರುವ ಸೆವೆಂಥ್‌ ಜನರೇಷನ್‌ ಐಪ್ಯಾಡ್‌ ಬಿಡುಗಡೆಯಾಗಿದೆ. ಆನ್‌ಲೈನ್‌ನಲ್ಲಿ ಹೊಸ ಐಪ್ಯಾಡ್‌ಗೆ ₹ 29,000-₹ 49,000 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.