ಇಲಾನ್ ಮಸ್ಕ್ ಹಾಗೂ ಗ್ರೊಕಿಪೀಡಿಯಾ
ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದ ಅತಿ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಅವರು, ವಿಕಿಪೀಡಿಯವನ್ನು ಹೋಲುವ ಆನ್‌ಲೈನ್ ಎನ್‌ಸೈಕ್ಲೊಪೀಡಿಯಾ ‘ಗ್ರೊಕಿಪೀಡಿಯಾ’ವನ್ನು ಸೋಮವಾರ ಬಿಡುಗಡೆಗೊಳಿಸಿದ್ದಾರೆ.
‘ಗ್ರೊಕಿಪೀಡಿಯಾ 0.1ನೇ ಆವೃತ್ತಿ ಲಭ್ಯವಿದೆ. ಈ ಆವೃತ್ತಿಯೇ ವಿಕಿಪೀಡಿಯಾಗಿಂತ 10 ಪಟ್ಟು ಚೆನ್ನಾಗಿದೆ‘ ಎಂದು ಮಸ್ಕ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ವಿಕಿಪೀಡಿಯದಂತೆಯೇ ಬಳಕೆದಾರರೇ ಸಂಪಾದಿಸುವ ಅವಕಾಶ ಇರಲಿದೆ. ತಮ್ಮದೇ ಎ.ಐ ಕಂಪನಿಯಾಗಿರುವ ‘ಎಕ್ಸ್‌ಎಐ‘ (xAI) ಮೂಲಕ ವಿಷಯಗಳನ್ನು ಸಂಪಾದಿಸುವ ಆಯ್ಕೆ ಇದೆ,
ವಿಕಿಪೀಡಿಯ ಪ್ರಚುರುಪಡಿಸುತ್ತಿರುವ ‘ಸುಳ್ಳು ಸುದ್ದಿಗಳ ಶುದ್ಧೀಕರಣ’ಕ್ಕೆ ಈ ಹೊಸ ವೇದಿಕೆಯನ್ನು ಸೃಜಿಸಲಾಗಿದೆ ಎಂದು ಇಲಾನ್ ಮಸ್ಕ್ ‘ಎಕ್ಸ್’ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನ (ಅಮೆರಿಕದ ಸಮಯ) ಬಿಡುಗಡೆಗೊಂಡ ಸ್ವಲ್ಪ ಹೊತ್ತಿನಲ್ಲಿಯೇ ಗ್ರೊಕಿಪೀಡಿಯಾ ‘ಕ್ರ್ಯಾಶ್‘ ಆಯಿತು. ಎಂಟು ಲಕ್ಷಕ್ಕೂ ಅಧಿಕ ಎಐ ನಿರ್ಮಿತ ಎನ್‌ಸೈಕ್ಲೊಪೀಡಿಯಾ ವಿಷಯಗಳು ದಾಖಲಾದವು. ವಿಕಿಪೀಡಿಯದಲ್ಲಿ ಬಳಕೆದಾದರರೇ ಬರೆದ 80 ಲಕ್ಷ ವಿಷಯಗಳು ಲಭ್ಯವಿದೆ.
grokipedia.com ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಕಾಣುವ ‘ಸರ್ಚ್ ಬಾರ್‘ನಲ್ಲಿ ಅಗತ್ಯವಿರುವ ವಿಷಯಗಳ ಬಗ್ಗೆ ಮಾಹಿತಿ ಹುಡುಕಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.