ADVERTISEMENT

ಹಬ್ಬದ ಮಾರಾಟ: ರಿಯಾಯ್ತಿ ದರಕ್ಕೆ ಹಾನರ್‌ ಸ್ಮಾರ್ಟ್‌ಫೋನ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 9:30 IST
Last Updated 24 ಸೆಪ್ಟೆಂಬರ್ 2019, 9:30 IST
honor 20i
honor 20i   

ನವದೆಹಲಿ: ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಹಬ್ಬದ ಮಾರಾಟದ ಸಂದರ್ಭದಲ್ಲಿರಿಯಾಯ್ತಿ ದರದಲ್ಲಿ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ ಮತ್ತು ವೇರೆಬಲ್ಸ್‌ ನೀಡುವುದಾಗಿ ಹಾನರ್‌ ಇಂಡಿಯಾ ಕಂಪನಿ ಘೊಷಿಸಿದೆ.

ಇದೇ 29 ರಿಂದ ಅಕ್ಟೋಬರ್‌ 4ರವರೆಗೆ ಹಬ್ಬದ ವಿಶೇಷ ಮಾರಾಟ ನಡೆಯಲಿದ್ದು, ಅತ್ಯಂತ ಆಕರ್ಷಕ ದರದಲ್ಲಿ ಉತ್ಪನ್ನಗಳನ್ನು ನೀಡುವುದಾಗಿ ತಿಳಿಸಿದೆ.ಅಮೆಜಾನ್‌ನಲ್ಲಿ ಎಸ್‌ಬಿಐ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಬಳಸಿದರೆ ಶೇ 10ರವರೆಗೆ ಇನ್‌ಸ್ಟಂಟ್‌ ಡಿಸೌಂಟ್‌, ಫ್ಲಿಪ್‌ಕಾರ್ಟ್‌ನಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಮತ್ತು ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಸಿದರೆ ಶೇ 10ರವರೆಗೆ ಇನ್‌ಸ್ಟಂಟ್‌ ಡಿಸೌಂಟ್‌ ಸಿಗಲಿದೆ.

ಹಾನರ್‌ 8ಎಕ್ಸ್‌ 4+64ಜಿಬಿಬೆಲೆ ₹9,999;6+64ಜಿಬಿಬೆಲೆ ₹10,999;6+128ಜಿಬಿ ಬೆಲೆ ₹11,999

ADVERTISEMENT

ಹಾನರ್‌ 9ಎನ್‌: 3+32ಜಿಬಿಗೆ ₹7,999;4+64ಜಿಬಿಗೆ ₹8,499;6+128ಜಿಬಿಗೆ ₹8,999

ಹಾನರ್‌ 10 ಲೈಟ್:3+32ಜಿಬಿಗೆ₹ 7,999;4+64ಜಿಬಿಗೆ ₹8,999

ಹಾನರ್‌ 20ಐ:4+128ಜಿಬಿಗೆ ₹11,999

ಹಾನರ್‌ ಬ್ಯಾಂಡ್‌ 5 ₹ 2,299ಕ್ಕೆ, ಹಾನರ್‌ ಪ್ಯಾಡ್‌ 5 ₹11,999ಕ್ಕೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.