ADVERTISEMENT

ಎಚ್‌ಪಿಯಿಂದ ಆಲ್‌–ಇನ್‌–ಒನ್‌ ಪಿಸಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 9:55 IST
Last Updated 13 ಆಗಸ್ಟ್ 2022, 9:55 IST
ಎಚ್‌ಪಿ ಆಲ್‌–ಇನ್‌–ಒನ್‌ ಪಿಸಿ
ಎಚ್‌ಪಿ ಆಲ್‌–ಇನ್‌–ಒನ್‌ ಪಿಸಿ   

ಬೆಂಗಳೂರು: ಎಚ್‌ಪಿ ಕಂಪನಿಯುಪರ್ಸನಲ್‌ ಕಂಪ್ಯೂಟರ್‌ ಮತ್ತು ಟಿವಿಯನ್ನು ಒಂದೇ ಸಾಧನದಲ್ಲಿ ನೀಡುವ ಆಲ್‌–ಇನ್‌–ಒನ್‌ ಪಿಸಿಗಳ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡಿದೆ.

ಹೈಬ್ರಿಡ್‌ ಕೆಲಸ ನಿರ್ವಹಿಸುವವರಿಗೆ ಇದರಿಂದ ಹೆಚ್ಚಿನ ಉಪಯೋಗ ಆಗಲಿದೆ ಎಂದು ಕಂಪನಿ ತಿಳಿಸಿದೆ. ಎಚ್‌ಪಿ ಎನ್‌ವಿ 34 ಇಂಚು ಮತ್ತು ಪೆವಿಲಿಯನ್‌ 31.5 ಇಂಚಿನ ಮಾನಿಟರ್‌ಗಳು ಇದ್ದು, ಕ್ರಮವಾಗಿ ಇಂಟೆಲ್‌ನ 11ನೇ ಪೀಳಿಗೆಯ ಮತ್ತು 12ನೇ ಪೀಳಿಗೆಯ ಪ್ರೊಸೆಸರ್‌ಗಳನ್ನು ಹೊಂದಿವೆ.

ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಯಾವಾಗಲೂ ಹೊಸ ಉತ್ಪನ್ನಗಳನ್ನು ರೂಪಿಸಲು ಕಂಪನಿಯು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಹೈಬ್ರಿಡ್‌ ಕೆಲಸದ ವ್ಯವಸ್ಥೆಗೆ ತಕ್ಕಂತೆ ಈ ಪಿಸಿಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಎಚ್‌ಪಿ ಇಂಡಿಯಾದ ಪಿಸಿ ವಿಭಾಗದ ಹಿರಿಯ ನಿರ್ದೇಶಕ ವಿಕ್ರಂ ಬೇಡಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.