ADVERTISEMENT

ನೂತನ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾದ ಐಕ್ಯೂ

ಐಕ್ಯೂ ಹೊಸ ಮಾದರಿಯ ಸ್ಮಾರ್ಟ್‌ಫೋನ್ ಪರಿಚಯಿಸಲು ಮುಂದಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2022, 13:19 IST
Last Updated 17 ನವೆಂಬರ್ 2022, 13:19 IST
   

ಬೆಂಗಳೂರು: ಗ್ಯಾಜೆಟ್ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್ ಆಗಿರುವ ಐಕ್ಯೂ, ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಐಕ್ಯೂ 11 5G ಸ್ಮಾರ್ಟ್‌ಫೋನ್, ಆರಂಭದಲ್ಲಿ ಮಲೇಷ್ಯಾದಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ನೂತನ ಸ್ಮಾರ್ಟ್‌ಫೋನ್‌ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 8 ಜನರೇಷನ್ 2 ಪ್ರೊಸೆಸರ್ ಇದೆ ಎಂದು ಕಂಪನಿ ಹೇಳಿದೆ.

ಚೀನಾ ಮೂಲದ ಐಕ್ಯೂ, ದೇಶದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಅಲ್ಲದೆ, ಈಗಾಗಲೇ ಭಾರತದಲ್ಲಿ 5G ಬಳಕೆ ಆರಂಭವಾಗಿದ್ದು, ಜನರು ಹೊಸ ಫೋನ್ ಖರೀದಿಸುವಾಗ 5G ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಆದ್ಯತೆ ನೀಡುವುದರಿಂದ, ಐಕ್ಯೂ ಹೊಸ ಮಾದರಿಗಳಲ್ಲಿ 5G ಬೆಂಬಲ ಒದಗಿಸುತ್ತಿದೆ.

ADVERTISEMENT

ಐಕ್ಯೂ 11 5G ಸ್ಮಾರ್ಟ್‌ಫೋನ್, 50 ಮೆಗಾಪಿಕ್ಸೆಲ್ ಸಹಿತ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ಮತ್ತು 6.78 ಇಂಚಿನ ಡಿಸ್‌ಪ್ಲೇ, 5,000mAh ಬ್ಯಾಟರಿ ಜತೆಗೆ 120W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.